ಕಳೆದೊಂದು ವರ್ಷದಲ್ಲಿ ದೇಶದಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಒಟ್ಟು ಮನೆಗಳಲ್ಲಿ 50% ಮನೆಗಳಿಗೆ ಮೋದಿ ಸರಕಾರವು ಉಚಿತ ವಿದ್ಯುತ್ ಸಂಪರ್ಕ ಒದಗಿಸಿದೆ. ದೇಶದ ವಿದ್ಯುತ್ ರಹಿತ ಮನೆಗಳಿಗೆ ವಿದ್ಯುತ್ ಒದಗಿಸುವ ಯೋಜನೆಯಡಿಯಲ್ಲಿ ಪ್ರಧಾನ ಮಂತ್ರಿ ಸರಲ್ ಬಿಜಲೀ ಹರ್ ಘರ್ ಯೋಜನಾ (SAUBHAGYA) ಎಂಬ ಯೋಜನೆಯನ್ನು ರೂಪಿಸಿ ಅಕ್ಟೋಬರ್ 2017 ರಿಂದ ಕಾರ್ಯಗತಗೊಳಿಸಿತ್ತು. 2016 ರಲ್ಲಿ ದೇಶದ ಮೂಲೆ ಮೂಲಗಳಲ್ಲಿ ಸರ್ವೇ ನಡೆಯಿಸಿದ ಕೇಂದ್ರ ಸರಕಾರವು ದೇಶದೊಳಗೆ 3,18,13,050 (ಮೂರು ಕೋಟಿಯ, ಹದಿನೆಂಟು ಲಕ್ಷದ, ಹದಿಮೂರು ಸಾವಿರದ, ಐವತ್ತು) ವಿದ್ಯುತ್ ರಹಿತ ಮನೆಗಳನ್ನು ಪತ್ತೆಹಚ್ಚಿ ಪಟ್ಟಿಮಾಡಿತು. ಡಿಸೆಂಬರ್ 2018 ರ ಒಳಗಾಗಿ ಈ ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನಿರಿಸುವ ಗುರಿಯನ್ನಿಟ್ಟಿತು. ಇದರ ಪರಿಣಾಮವಾಗಿ ದಿನಾಂಕ 07/10/2018 ಕ್ಕೆ ಅನ್ವಯವಾಗುವಂತೆ ಒಟ್ಟು ವಿದ್ಯುತ್ ರಹಿತ ಮನೆಗಳ 50.09% (1,59,34,795) ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಕೊಡಿಸುವಲ್ಲಿ ಯಶಸ್ವಿಯಾಗಿದೆ.
ಭಾರತದಲ್ಲಿ ಒಟ್ಟು 21, 90, 65, 829 (ಇಪ್ಪತ್ತೊಂದು ಕೋಟಿಯ ತೊಂಭತ್ತು ಲಕ್ಷ ದ ಅರುವತ್ತೈದು ಸಾವಿರದ ಎಂಟುನೂರ ಇಪ್ಪತ್ತೊಂಭತ್ತು) ಮನೆಗಳಿವೆ. ಅಕ್ಟೋಬರ್ 2017 ರ ವರೆಗೆ 18,40,68,710 ಮನೆಗಳಿಗೆ ವಿದ್ಯುತ್ ಸಂಪರ್ಕ ಅಗಿತ್ತು. ಆದರೆ 3,49,97,119 ಮನೆಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಸರ್ವರಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಕೇಂದ್ರ ಸರ್ಕಾರದ ಸೌಭಾಗ್ಯ ಯೋಜನೆಯು ಅಕ್ಟೋಬರ್ 2017 ರಂದು ಆರಂಭವಾಯಿತು. ಇದರ ಪೂರ್ವಭಾವಿಯಾಗಿ ಪ್ರಧಾನ ಮಂತ್ರಿ ಗ್ರಾಮೀಣ ವಿದ್ಯುತೀಕರಣ ಯೋಜನೆಯಡಿಯಲ್ಲಿ ವಿದ್ಯುತೀಕರಣಗೊಳ್ಳದ 18452 ಗ್ರಾಮಗಳಿಗೆ ಪೂರ್ವ ನಿರ್ಧಾರಿತ 1000 ದಿನಗಳ ಮೊದಲೇ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. ಬೆಟ್ಟ, ಕಣಿವೆ, ಪರ್ವತ, ಕಾಡು ಮುಂತಾದ ಅತೀ ಕಠಿಣ ಪ್ರದೇಶಗಳಲ್ಲಿ ಇರುವ ಕುಗ್ರಾಮಗಳಿಗೆ ವಿದ್ಯುತ್ ತಂತಿಗಳನ್ನು ಎಳೆದು ಟ್ರಾನ್ಸ್ಫಾರ್ಮರ್ಗಳನ್ನು ಸ್ಥಾಪಿಸಿ ವಿದ್ಯುತ್ ಸಂಪರ್ಕವನ್ನು ಕೊಡಲಾಯಿತು.
ಅಕ್ಟೋಬರ್ 2017 ರಿಂದ ಇದುವರೆಗೆ 1,59,34,798 (ಒಂದು ಕೋಟಿಯ ಐವತ್ತೊಂಭತ್ತು ಲಕ್ಷದ ಮೂವತ್ತನಾಲ್ಕು ಸಾವಿರದ ಏಳುನೂರ ತೊಂಭತ್ತ ಎಂಟು ಮನೆಗಳಿಗೆ) ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇನ್ನೂ 1,58,78,255 ಮನೆಗಳಿಗೆ ವಿದ್ಯುತ್ ಸಂಪರ್ಕ ಆಗಬೇಕಿದೆ. ಕೇಂದ್ರ ಸರಕಾರವು ವಿದ್ಯುತ್ ಮಂತ್ರಾಲಯಕ್ಕೆ ಭಾರತದ ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು 2018 ರ ಡಿಸೆಂಬರ್ 31 ನ್ನು ಡೆಡ್ ಲೈನ್ ಆಗಿ ನೀಡಿದೆ. ಆ ದಿಸೆಯಲ್ಲಿ ಮನೆ ಮನೆ ವಿದ್ಯುತೀಕರಣವೂ ವೇಗವನ್ನು ಪಡೆದುಕೊಳ್ಳುತ್ತಿದೆ. ದೇಶದಾದ್ಯಂತ ದಿನವೊಂದಕ್ಕೆ 50000 ದಿಂದ ಒಂದು ಲಕ್ಷಗಳಷ್ಟು ಮನೆಗಳಿಗೆ ಕರೆಂಟ್ ಕನೆಕ್ಷನ್ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ವೇಗವು ದ್ವಿಗುಣವಾಗಲಿದೆ ಹಾಗೂ 2018 ರ ಡಿಸೆಂಬರ್ 31 ರಂದು ದೇಶದ ಎಲ್ಲಾ ಮನೆಗಳಲ್ಲಿ ವಿದ್ಯುತ್ ದೀಪಗಳು ಬೆಳಗಲಿವೆ.
ಕೇಂದ್ರ ಸರಕಾರವು ಸೌಭಾಗ್ಯ ಯೋಜನೆಗೆ 16,325 ಕೋಟಿ ರೂಪಾಯಿಗಳನ್ನು ವ್ಯಯ ಮಾಡುತ್ತಿದೆ. ಈ ಯೋಜನೆಯಲ್ಲಿ ಮನೆಯೊಂದಕ್ಕೆ ಉಚಿತ ವಯರಿಂಗ್, 5 LED ಬಲ್ಬ್ ಪಾಯಿಂಟ್, ಒಂದು ಫ್ಯಾನ್ ಪಾಯಿಂಟ್ ಹಾಗೂ ಒಂದು ಪವರ್ ಪ್ಲಗ್ ಸೌಕರ್ಯವು ದೊರಕುತ್ತಿದೆ. ಜೊತೆಗೆ 5 ವರ್ಷಗಳ ಉಚಿತ ರಿಪೇರಿ ಹಾಗೂ ನಿರ್ವಹಣೆಯ(Maintainance) ಸೌಲಭ್ಯವೂ ದೊರಕುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.