ನವದೆಹಲಿ: ದೆಹಲಿ ಸ್ವಚ್ಛತಾ ಕಾರ್ಮಿಕರು ಕಳೆದ ಕೆಲವು ದಿನಗಳಿಂದ ನಡೆಸುತ್ತಿದ್ದ ಧರಣಿಯನ್ನು ಶುಕ್ರವಾರ ವಾಪಾಸ್ ಪಡೆದುಕೊಂಡಿದ್ದಾರೆ. ಅವರು ಧರಣಿ ವಾಪಾಸ್ ಪಡೆಯುತ್ತಿದ್ದಂತೆ ಪೊರಕೆ ಹಿಡಿದು ಬೀದಿಗಿಳಿದಿರುವ ಹಲವು ಎಎಪಿ ನಾಯಕರು ಕಸ ಗುಡಿಸುತ್ತಿದ್ದಾರೆ. ಆದರೆ ಇದು ಎಎಪಿಯ ನಾಟಕ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೀಶ್ ಸಿಸೋಡಿಯಾ, ಅಶುತೋಷ್, ಅಲ್ಕಾ ಲಾಂಬಾ ಸೇರಿದಂತೆ ಹಲವಾರು ಮಂದಿ ತಮ್ಮ ತಮ್ಮ ಕ್ಷೇತ್ರದಲ್ಲಿ ಬೆಂಬಲಿಗರೊಂದಿಗೆ ಕಸ ಗುಡಿಸುತ್ತಿದ್ದಾರೆ. ಕೆಲವೊಂದು ಕಡೆ ಸ್ಥಳಿಯರು ಕಸ ಸ್ವಚ್ಛ ಮಾಡದಂತೆ ಎಎಪಿ ನಾಯಕರನ್ನು ತಡೆದಿದ್ದಾರೆ. ಫೋಟೋಗಾಗಿ ಕಸ ಗುಡಿಸುತ್ತಿದ್ದಾರೆ, ಸ್ವಚ್ಛತಾ ಕಾರ್ಮಿಕರು ಧರಣಿ ಹಿಂಪಡೆದ ಬಳಿಕ ಬೀದಿ ಕ್ಲೀನ್ ಮಾಡುವ ನಾಟಕ ಮಾಡುವ ಅಗತ್ಯವಿಲ್ಲ ಎಂದು ಗುಡುಗಿದ್ದಾರೆ.
ಕಳೆದ ಹಲವಾರು ದಿನಗಳಿಂದ ದೆಹಲಿ ಸ್ವಚ್ಛತಾ ಕಾರ್ಮಿಕರು ತಮಗೆ ವೇತನ ಸಿಕ್ಕಿಲ್ಲ ಎಂದು ಆರೋಪಿಸಿ ಧರಣಿ ನಡೆಸುತ್ತಿದ್ದರು, ಇದರ ಪರಿಣಾಮ ರಾಷ್ಟ್ರ ರಾಜಧಾನಿ ಕಸದ ತೊಟ್ಟಿಯಾಗಿ ಪರಿಣಮಿಸಿದೆ, ಟನ್ಗಟ್ಟಲೆ ಕಸಗಳು ರಸ್ತೆ ಬದಿಯಲ್ಲಿ ಬಿದ್ದಿವೆ. ಧರಣಿಯ ವೇಳೆ ರಸ್ತೆ ಸ್ಚಚ್ಛ ಮಾಡಲು ಬಾರದ ಎಎಪಿ ನಾಯಕರು ಇದೀಗ ಕಾರ್ಮಿಕರು ಧರಣಿ ಹಿಂಪಡೆದ ಬಳಿಕ ಪೊರಕೆ ಹಿಡಿದು ಬೀದಿಗಿಳಿದುದರ ಔಚಿತ್ಯವೇನು ಎಂಬುದು ದೆಹಲಿಗರ ಪ್ರಶ್ನೆ.
ಒಟ್ಟಿನಲ್ಲಿ ಪೊರಕೆಯ ಚಿಹ್ನೆ ಇಟ್ಟುಕೊಂಡಿರುವ ಎಎಪಿ ದೆಹಲಿಯಲ್ಲಿ ಕಸ ಬಿದ್ದಾಗಲೇ ಸ್ವಚ್ಛಗೊಳಿಸಲು ಮುಂದಾಗಿದ್ದರೆ ಜನರ ವಿಶ್ವಾಸವನ್ನಾದರೂ ಗಳಿಸಬಹುದಿತ್ತು, ಆದರೀಗ ಎಲ್ಲಾ ಮುಗಿದ ಬಳಿಕ ಪೊರಕೆ ಹಿಡಿದಿರುವುದು ಅದರ ಉದ್ದೇಶವನ್ನೇ ಪ್ರಶ್ನೆಗೀಡು ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.