ಇಸ್ಲಾಮಾಬಾದ್: ಮಯನ್ಮಾರ್ ಗಡಿಯಲ್ಲಿ ಭಾರತ ನಡೆಸಿದ ಉಗ್ರ ವಿರೋಧಿ ಕಾರ್ಯಾಚರಣೆ ಪಾಕಿಸ್ಥಾನವನ್ನು ಬೆಚ್ಚಿ ಬೀಳಿಸಿದೆ. ಅಷ್ಟೇ ಅಲ್ಲದೇ ಭಾರತೀಯ ನಾಯಕರುಗಳು ನೇರವಾಗಿ ಪಾಕ್ಗೆ ಎಚ್ಚರಿಕೆಯ ಸಂದೇಶಗಳನ್ನು ನೀಡುತ್ತಿರುವುದು ಆ ದೇಶವನ್ನು ಮತ್ತಷ್ಟು ಕೆರಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕ್ ಪ್ರಧಾನಿ ನವಾಝ್ ಶರೀಫ್, ‘ಭಾರತೀಯ ನಾಯಕರುಗಳು ನೀಡುತ್ತಿರುವ ಹೇಳಿಕೆಗಳು ವಾತಾವರಣವನ್ನು ಬಿಗಡಾಯಿಸುತ್ತಿದೆ ಮತ್ತು ಎರಡು ದೇಶಗಳನ್ನು ಪ್ರಾದೇಶಿಕ ಸಹಕಾರ ಮತ್ತು ಸ್ಥಿರತೆಯ ಗುರಿಯಿಂದ ಹಿಮ್ಮುಖಗೊಳಿಸುತ್ತಿದೆ ಎಂದಿದ್ದಾರೆ.
ಮಯನ್ಮಾರ್ ಕಾರ್ಯಾಚರಣೆಯ ಬಳಿಕ ಹೇಳಿಕೆ ನೀಡಿದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಭಾರತದ ಹೊಸ ರೂಪವನ್ನು ನೋಡಿ ಭಯಭೀತಗೊಂಡವರು ಈಗಾಗಲೇ ಪ್ರತಿಕ್ರಿಯೆ ನೀಡಲು ಆರಂಭಿಸಿದ್ದಾರೆ ಎನ್ನುವ ಮೂಲಕ ಪಾಕ್ಗೆ ಟಾಂಗ್ ನೀಡಿದ್ದರು.
ಭಾರತದ ನಾಯಕರ ಹೇಳಿಕೆಗಳಿಂದ ಇಡೀ ಪಾಕಿಸ್ಥಾನವೇ ನಿರಾಶೆಗೊಂಡಿದೆ ಎಂದಿದ್ದಾರೆ.
ಇನ್ನೊಂದೆಡೆ ಪಾಕ್ ಭಾರತದ ಗಡಿಯಲ್ಲಿ ರಗಳೆ ಸೃಷ್ಟಿಸುತ್ತಿದೆ ಎಂದು ಬಾಂಗ್ಲಾದಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆಯನ್ನು ಖಂಡಿಸಿರುವ ಪಾಕ್, ತನ್ನ ಸಂಸತ್ತನಲ್ಲಿ ಮೋದಿ ವಿರುದ್ಧ ಖಂಡನಾ ನಿರ್ಣಯವನ್ನು ಕೈಗೊಂಡಿದೆ.
‘ಭಾರತ ಅತ್ಯುಚ್ಚ ಮನಸ್ಥಿತಿಯನ್ನು ಹೊಂದಿದ್ದು, ಪಾಕಿಸ್ಥಾನದ ಗಡಿಯನ್ನು ಉಲ್ಲಂಘಿಸಲು ನಾವು ಅದಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ’ ಎಂದು ನವಾಝ್ ಹೇಳಿಕೊಂಡಿದ್ದಾರೆ.
ಮಯನ್ಮಾರ್ ಗಡಿಗೆ ನುಗ್ಗಿ ಉಗ್ರರನ್ನು ಅಟ್ಟಾಡಿಸಿದ ಭಾರತದ ದಿಟ್ಟತನ ಪಾಕಿಸ್ಥಾನವನ್ನು ನಡುಗಿಸಿದೆ ಎಂಬುದು ಅವರ ಈ ಹೇಳಿಕೆಯಿಂದಲೇ ಸಾಬೀತಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.