ನವದೆಹಲಿ: ಭಾರತೀಯ ರೈಲ್ವೇಯನ್ನು ಆಧುನೀಕರಣಗೊಳಿಸಲು ರೈಲ್ವೇ ಸಚಿವಾಲಯ ಟೊಂಕ ಕಟ್ಟಿ ನಿಂತಿದೆ. ಮುಂದಿನ ಆರು ತಿಂಗಳುಗಳಲ್ಲಿ ದೇಶದ 6 ಸಾವಿರ ರೈಲ್ವೇ ನಿಲ್ದಾಣಗಳಲ್ಲಿ ವೈಫೈ ಅಳವಡಿಸುವ ಪ್ರಕ್ರಿಯೆ ಭರದಿಂದ ಸಾಗುತ್ತಿದೆ.
ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು, ಮುಂದಿನ 6 ತಿಂಗಳಲ್ಲಿ ದೇಶದ 6 ಸಾವಿರ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ವೈಫೈ ಸೌಲಭ್ಯ ಲಭ್ಯವಾಗಲಿದೆ ಎಂದು ಘೋಷಣೆ ಮಾಡಿದ್ದಾರೆ.
ರೈಲುಗಳ ಸಮಯ ನಿಖರತೆಯ ಬಗ್ಗೆ ಹೇಳಿಕೆ ನೀಡಿರುವ ಅವರು, ಕಳೆದ ಎಪ್ರಿಲ್ 1ರಿಂದ ರೈಲುಗಳ ಸಮಯ ನಿಖರತೆಯಲ್ಲಿ ಶೇ.73ರಿಂದ ಶೇ.74ರಷ್ಟು ಸುಧಾರಣೆ ಕಂಡಿದೆ. ಕಂಪ್ಯೂಟರ್ ಜನರೇಟೆಡ್ ಟೈಮ್ ನೆಟ್ವರ್ಕ್ ಅಳವಡಿಸಿರುವುದು ಇದಕ್ಕೆ ಕಾರಣ ಎಂದಿದ್ದಾರೆ.
ಅಲ್ಲದೇ ಎಲ್ಲಾ ರೈಲಿನ ಲೊಕೊಮೋಟಿವ್ಗಳಲ್ಲಿ ಜಿಪಿಎಸ್ ಡಿವೈಸ್ಗಳನ್ನು ಅಳವಡಿಸುವ ಕಾರ್ಯ ಮಾಡುತ್ತಿದ್ದೇವೆ, ಇದರಿಂದ ಪ್ರಯಾಣಿಕರು ತಮ್ಮ ಮೊಬೈಲ್ ಮೂಲಕ ರೈಲಿನ ಆಗಮನದ ಖಚಿತ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.