ನವದೆಹಲಿ: ದೇಶದ ಮೊತ್ತ ಮೊದಲ ಜೈವಿಕ ಇಂಧನ ಆಧಾರಿತ ವಿಮಾನ ಸೋಮವಾರ ಡೆಹ್ರಾಡೂನ್ನಿಂದ ದೆಹಲಿಗೆ ಪ್ರಯಾಣಿಸಲಿದೆ. ಸ್ಪೈಸ್ಜೆಟ್ ಸಂಸ್ಥೆಯ ಟರ್ಬೊಪ್ರಾಪ್ ಕ್ಯೂ-400 ವಿಮಾನ ಇದಾಗಿದೆ.
ಈಗಾಗಲೇ ಯುಎಸ್, ಆಸ್ಟ್ರೇಲಿಯಾದಂತಹ ರಾಷ್ಟ್ರಗಳು ಜೈವಿಕ ಇಂಧನ ವಾಣಿಜ್ಯ ವಿಮಾನಗಳನ್ನು ಹಾರಾಟ ನಡೆಸುತ್ತಿವೆ, ಆದರೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪೈಕಿ ಈ ಪ್ರಯತ್ನ ನಡೆಸುತ್ತಿರುವುದು ಭಾರತವೇ ಮೊದಲು.
ಮೂಲಗಳ ಪ್ರಕಾರ, ಕ್ಯೂ-400 ವಿಮಾನ ಡೆಹ್ರಾಡೂನ್ನಿಂದ ಟೇಕಾಫ್ ಆಗಿ 10 ನಿಮಿಷಗಳ ಕಾಲ ಅದೇ ನಗರದಲ್ಲಿ ಸುತ್ತಾಡಲಿದೆ. ಬಳಿಕ ಅದೇ ಜಾಗಕ್ಕೆ ರಿಟರ್ನ್ ಆಗಲಿದೆ. ಈ ಪರೀಕ್ಷೆ ಯಶಸ್ವಿಯಾದರೆ ಬಳಿಕ ಮತ್ತೊಮ್ಮೆ ಟೇಕಾಫ್ ಆಗಿ ವಿಮಾನ ದೆಹಲಿಗೆ ಆಗಮಿಸಲಿದೆ. ರೆಗ್ಯೂಲೇಟರಿ ಏಜೆನ್ಸಿಯ ಹಲವಾರು ಅಧಿಕಾರಿಗಳು ಈ ವಿಮಾನದಲ್ಲಿರಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.