ತಿರುವನಂತಪರುಂ: ನೆರೆಯಿಂದ ತತ್ತರಿಸಿರುವ ಕೇರಳ ರಾಜ್ಯಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿ ಸಿಎಂ ಪಿನರಾಯಿ ವಿಜಯನ್ ಸೇರಿದಂತೆ ಹಿರಿಯ ಸಚಿವರೊಂದಿಗೆ ನೆರೆಯಿಂದಾದ ಹಾನಿಗಳ ಬಗ್ಗೆ ಅವಲೋಕನ ನಡೆಸುತ್ತಿದ್ದಾರೆ.
ವೈಮಾನಿಕ ಸಮೀಕ್ಷೆಯನ್ನು ನಡೆಸುವ ಸಲುವಾಗಿ ಶುಕ್ರವಾರ ಸಂಜೆ ಮೋದಿ ತಿರುವನಂತಪುರಂ ಏರ್ಪೋರ್ಟ್ಗೆ ಬಂದಿಳಿದರು, ಅವರನ್ನು ಪಿನರಾಯಿ ವಿಜಯನ್, ಕೇಂದ್ರ ಸಚಿವ ಅಲ್ಫೋನ್ಸ್ ಸೇರಿದಂತೆ ಅನೇಕ ಮುಖಂಡರು ಬರಮಾಡಿಕೊಂಡರು.
ಶನಿವಾರ ಬೆಳಿಗ್ಗೆ ಅವರು ಕೊಚ್ಚಿಗೆ ಬಂದಿಳಿದಿದ್ದು, ಆದರೆ ಪ್ರತಿಕೂಲ ಹವಮಾನದ ಪರಿಣಾಮವಾಗಿ ವೈಮಾನಿಕ ಸಮೀಕ್ಷೆ ರದ್ದಾಗಿದೆ, ಹೀಗಾಗಿ ಅವರು ಕೇರಳ ಸರ್ಕಾರದ ಮುಖಂಡರೊಂದಿಗೆ ನೆರೆ ಅವಲೋಕನ ಸಭೆ ನಡೆಸುತ್ತಿದ್ದಾರೆ. ನೆರೆಯಿಂದಾದ ಹಾನಿಗಳ ಬಗ್ಗೆ, ರಕ್ಷಣಾ ಕಾರ್ಯದ ಬಗ್ಗೆ ಇಂಚಿಂಚು ಮಾಹಿತಿಗಳನ್ನು ಪಡೆಯುತ್ತಿದ್ದಾರೆ.
ಈಗಾಗಲೇ ಕೇರಳದಲ್ಲಿ ನೆರೆಯಿಂದಾಗಿ 100ಕ್ಕೂ ಅಧಿಕ ಜನ ಸಾವಿಗೀಡಾಗಿದ್ದಾರೆ, ಅಪಾರ ಸಂಖ್ಯೆಯ ಜನ ಮನೆ ಮಠ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.