ನವದೆಹಲಿ: ವೋಟಿಗಾಗಿ ನೋಟು ಪ್ರಕರಣ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ನಡುವೆ ತೀವ್ರ ವಾಗ್ವಾದವನ್ನು ಸೃಷ್ಟಿಸಿದೆ.
ತನ್ನ ವಿರುದ್ಧ ವಿಡಿಯೋ ಬಿಡುಗಡೆ ಮಾಡಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ನಾಯ್ಡು, ನನ್ನನ್ನು ಬಂಧಿಸಲು ಪ್ರಯತ್ನಿಸಿದರೆ ನಿಮ್ಮ ಸರ್ಕಾರವೇ ಉರುಳಿ ಬೀಳಬಹುದು ಎಂದು ಕೆಸಿಆರ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಟಿಡಿಪಿ ಶಾಸಕ ರೇವಂತ್ ರೆಡ್ಡಿ ಅವರು ಎಲ್ವೀಸ್ ಸ್ಟೀಫನ್ಸನ್ ಎಂಬುವವರಿಗೆ ತಮ್ಮ ಪಕ್ಷದ ಪರ ಮತ ಚಲಾಯಿಸುವಂತೆ ಆಮಿಷವೊಡ್ಡಿದ್ದರು. ಇದರಲ್ಲಿ ನಾಯ್ಡು ಅವರ ಕೈವಾಡವೂ ಇದೆ ಎಂಬುದು ಕೆಸಿಆರ್ ಆರೋಪ.
ಇದಕ್ಕೆ ಸಂಬಂಧಿಸಿದ ಒಂದು ವಿಡಿಯೋವನ್ನು ಕೆಸಿಆರ್ ಕುಟುಂಬದ ಒಡೆತನ ಟಿವಿ ಚಾನೆಲ್ ಬಿಡುಗಡೆ ಮಾಡಿತ್ತು.
ಇದರಿಂದ ಕೆಂಡಾಮಂಡಲರಾಗಿರುವ ನಾಯ್ಡು, ನನನ್ನು ಬಂಧಿಸಲು ಪ್ರಯತ್ನಿಸಿದರೆ ನಿಮ್ಮ ಆಡಳಿತವನ್ನೇ ಕೊನೆಗಾಣಿಸುತ್ತೇನೆ ಎಂದು ಕೆಸಿಆರ್ಗೆ ಎಚ್ಚರಿಕೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.