ಮುಂಬಯಿ: ಹಿಟ್ ಆಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಡ್ರೈವರ್ ಮೊದಲ ಬಾರಿಗೆ ನ್ಯಾಯಾಲಯದ ಮುಂದೆ ಹಾಜರಾಗಿದ್ದು, ಘಟನೆ ನಡೆದ ಸಂದರ್ಭ ಕಾರು ಚಲಾವಣೆ ಮಾಡುತ್ತಿದ್ದದ್ದು ನಾನೇ ಹೊರತು ಸಲ್ಮಾನ್ ಅವರಲ್ಲ ಎಂಬುದಾಗಿ ಹೇಳಿಕೆ ನೀಡಿದ್ದಾರೆ.
ಫುಟ್ಪಾತ್ನಲ್ಲಿ ಮಲಗಿದ್ದವರ ಮೈಮೇಲೆ ಕಾರು ಹಾದು ಹೋಗಲು ನಾನು ಕಾರಣನೇ ಹೊರತು ಸಲ್ಮಾನ್ ಅವರಲ್ಲ, ನನ್ನ ಕಾರಣದಿಂದಾಗಿ ಅವರು ಇಷ್ಟೆಲ್ಲಾ ಕಷ್ಟಪಡಬೇಕಾಯಿತು ಎಂದು ಚಾಲಕ ಅಶೋಕ್ ಸಿಂಗ್ ಹೇಳಿದ್ದಾನೆ. ಆತನ ಹೇಳಿಕೆಯಿಂದ 13 ವರ್ಷ ಹಳೆಯ ಪ್ರಕರಣಕ್ಕೆ ಮತ್ತೆ ಹೊಸ ತಿರುವು ಸಿಕ್ಕಿದೆ.
ಅಲ್ಲದೇ ಈ ರೀತಿ ನ್ಯಾಯಾಲಯದ ಮುಂದೆ ಹೇಳಲು ನನಗೆ ಹಣ ನೀಡಲಾಗಿದೆ ಎಂಬ ಆರೋಪವನ್ನು ತಳ್ಳಿ ಆತ ತಳ್ಳಿ ಹಾಕಿದ್ದಾನೆ. ಘಟನೆ ನಡೆದ ತಕ್ಷಣ ನಾನು, ಸಲ್ಮಾನ್ ಕಾರಿನಿಂದ ಹೊರಗಿಳಿದು ಕಾರನ್ನು ಮೇಲೆತ್ತಲು ಪ್ರಯತ್ನಿಸಿದ್ದೇವೆ ಎಂದಿದ್ದಾನೆ. ಸಲ್ಮಾನ್ ವಿರುದ್ಧ ಬೇಕಂತಲೇ ಸುಳ್ಳು ಅಪವಾದ ಹಾಕಲಾಗಿದೆ ಎಂದು ದೂರಿದ್ದಾನೆ.
ಪ್ರಕರಣದ ಬಗೆಗೆ ಸಲ್ಮಾನ್ ಹೇಳಿಕೆಯನ್ನು ಈಗಾಗಲೇ ರೆಕಾರ್ಡ್ ಮಾಡಲಾಗಿದೆ. ಎ.1 ರಂದು ಅಂತಿಮ ಹಂತದ ವಿಚಾರಣೆ ನಡೆಯಲಿದ್ದು, ಎ.16ಕ್ಕೆ ತೀರ್ಪು ಹೊರ ಬರುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.