ನವದೆಹಲಿ: ಭಾರತದ ಇಂಟರ್ನೆಟ್ ಬಳಕೆದಾರರು ಮುಂಬರುವ ವರ್ಷಗಳಲ್ಲಿ 50 ಬಿಲಿಯನ್ ಡಾಲರ್ ಆನ್ಲೈನ್ ವಾಣಿಜ್ಯ ವಹಿವಾಟು ನಡೆಸಲಿದ್ದಾರೆ ಎಂದು ವರದಿಯೊಂದು ಹೇಳಿದೆ. ದೇಶದಲ್ಲಿ ಪ್ರಸ್ತುತ 390 ಮಿಲಿಯನ್ ಜನರು ಇಂಟರ್ನೆಟ್ ಬಳಕೆ ಮಾಡುತ್ತಾರೆ ಎಂದು ಅಂದಾಜಿಸಲಾಗಿದೆ.
ಬೈನ್ ಆಂಡ್ ಕಂಪನಿ ಮತ್ತು ಗೂಗಲ್ ಆಂಡ್ ಒಮಿಡ್ಯರ್ ನೆಟ್ವರ್ಕ್ ಜಂಟಿಯಾಗಿ ನಡೆಸಿದ ಅಧ್ಯಯನ ‘ಅನ್ಲಾಕಿಂಗ್ ಡಿಜಿಟಲ್ ಫಾರ್ ಭಾರತ್: 50 ಬಿಲಿಯನ್ ಆಪಾರ್ಚುನಿಟಿ’ಯ ಪ್ರಕಾರ, ಮೂರರಿಂದ 5 ವರ್ಷಗಳೊಳಗೆ ಭಾರತದಲ್ಲಿ 50 ಬಿಲಿಯನ್ ಡಾಲರ್ ಆನ್ಲೈನ್ ವಹಿವಾಟುಗಳು ನಡೆಯುವ ನಿರೀಕ್ಷೆ ಇದೆ.
ಆದರೆ ಹೆಚ್ಚು ಹೆಚ್ಚು ಜನರನ್ನು ಇಂಟರ್ನೆಟ್ ಬಳಕೆದಾರರನ್ನಾಗಿಸುವುದು ಮತ್ತು ಇಂಟರ್ನೆಟ್ ಬಳಕೆದಾರರನ್ನು ಆನ್ಲೈನ್ ವಹಿವಾಟುದಾರರನ್ನಾಗಿಸುವುದು ಪ್ರಸ್ತುತ ಭಾರತದ ಮುಂದಿರುವ ಸವಾಲಾಗಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಜಾಗತಿಕವಾಗಿ ಭಾರತ ಎರಡನೇ ಅತೀದೊಡ್ಡ ಇಂಟರ್ನೆಟ್ ಬಳಕೆದಾರರ ದೇಶವಾಗಿದೆ, ಇಲ್ಲಿನ 390 ಮಿಲಿಯನ್ ಜನ ಸಕ್ರಿಯವಾಗಿ ಇಂಟರ್ನೆಟ್ ಬಳಸುತ್ತಾರೆ. ಪ್ರತಿ ವರ್ಷದ 40 ಮಿಲಿಯನ್ ಜನರ ಸೇರ್ಪಡೆಯಾಗುತ್ತಿದೆ.
ಇಂಟರ್ನೆಟ್ ಬಳಕೆದಾರರ ಸಂಖ್ಯೆ 500 ಮಿಲಿಯನ್ ತಲುಪಿದಾಗ ಆನ್ಲೈನ್ ವಹಿವಾಟು 50 ಬಿಲಿಯನ್ ಡಾಲರ್ ತಲುಪಬಹುದು ಎಂದು ಅಂದಾಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.