ಅಸ್ಸಾಂನಲ್ಲಿ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುವ ವ್ಯಕ್ತಿಯೊಬ್ಬರು ಕಸದ ತೊಟ್ಟಿಯಲ್ಲಿ ಸಿಕ್ಕ ಮಗವನ್ನು ಸಾಕಿ ಬೆಳೆಸಿ ಇನ್ಕಮ್ ಟ್ಯಾಕ್ಸ್ ಅಸಿಸ್ಟೆಂಟ್ ಕಮಿಷನರ್ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ತರಕಾರಿ ವ್ಯಾಪಾರಿ ಸೊಬೆರನ್ ಅವರು ಸಾಕು ಮಗಳನ್ನು ಅಸಿಸ್ಟೆಂಟ್ ಕಮಿಷನರ್ ಮಾಡಿದ ಆದರ್ಶಮಯ ತಂದೆ, ತೊಟ್ಟಿಯಲ್ಲಿ ಸಿಕ್ಕ ಮಗುವನ್ನು ಸ್ವಂತ ಮಗಳಂತೆ ಸಾಕಿ ಉತ್ತಮ ಶಿಕ್ಷಣ ನೀಡಿ ಅತ್ಯುನ್ನತ ಹುದ್ದೆ ಏರುವಂತೆ ಮಾಡಿರುವ ಇವರು ಸಮಾಜದಲ್ಲಿನ ಎಲ್ಲಾ ತಂದೆಯರಿಗೂ ಮಾದರಿಯಾಗಿ ನಿಲ್ಲುತ್ತಾರೆ.
ತಿನ್ಸುಖಿಯ ಪ್ರದೇಶದಲ್ಲಿ ತರಕಾರಿ ಅಂಗಡಿ ಇಟ್ಟಿದ ಸೊಬೆರನ್ ಅವರು ಮನೆಗೆ ವಾಪಾಸ್ಸಾದಾಗ ಕಸದ ತೊಟ್ಟಿಯಲ್ಲಿ ಮಗುವೊಂದು ಅಳುವುದು ಕಂಡು ಬಂತು. ತಕ್ಷಣ ಅದನ್ನು ಎತ್ತಿಕೊಂಡ ಅವರು, ಅದನ್ನು ಸಾಕುವ ನಿರ್ಧಾರಕ್ಕೆ ಬಂದರು. ಅದಕ್ಕೆ ಜ್ಯೋತಿ ಎಂದು ಹೆಸರಿಟ್ಟರು, ತನಗೆ ಬರುತ್ತಿದ್ದ ತುಸುವೇ ಆದಾಯದಲ್ಲಿ ಮಗುವನ್ನು ಉತ್ತಮ ರೀತಿಯಲ್ಲಿ ಬೆಳೆಸಿದರು, ತಾವು ಹಸಿದಿದ್ದರೂ ಆ ಮಗುವಿಗೆ ಹಸಿವು ಗೊತ್ತಾಗದಂತೆ ಅವರು ನೋಡಿಕೊಂಡರು.
ಜ್ಯೋತಿ ಪದವಿಯನ್ನು ಪಡೆದು, ಪಿಸಿಎಸ್ ತೇರ್ಗಡೆ ಮಾಡಿ, ಈಗ ಆದಾಯ ತೆರಿಗೆ ಇಲಾಖೆಯಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ. ತಮ್ಮ ತಂದೆಯ ಮೊಗದಲ್ಲಿ ಸಂತೋಷ ಜಿನುಗುವಂತೆ ಮಾಡಿದ್ದಾರೆ.
ಹೆಣ್ಣುಮಕ್ಕಳು ಇರುವುದೇ ಕೇವಲ ಮದುವೆ ಮಾಡಿ ಕಳುಹಿಸಿಕೊಡಲು ಎಂದು ಭಾವಿಸುವ ಪೋಷಕರು ಇರುವ ಈ ಕಾಲದಲ್ಲಿ ಸೊಬೆರನ್ ಅವರು ಮಗಳನ್ನು ಗಣ್ಯ ವ್ಯಕ್ತಿ ಮಾಡುವ ಕನಸು ಕಂಡು, ಬಡತನದಲ್ಲೂ ಕನಸನ್ನು ಈಡೇರಿಸಿದ್ದಾರೆ.
‘ನಾನು ಕಸದ ತೊಟ್ಟಿಯಿಂದ ಮಗುವನ್ನು ಎತ್ತಿಕೊಳ್ಳಲಿಲ್ಲ, ಬದಲಾಗಿ ನನ್ನ ಬದುಕನ್ನು ಬೆಳಗುವ, ನನ್ನನ್ನು ಹೆಮ್ಮೆಪಡಿಸುವ ಅಮೂಲ್ಯ ವಜ್ರದವೊಂದನ್ನು ಎತ್ತಿಕೊಂಡೆ’ -ಇದು ಸೊಬೆರನ್ ತನ್ನ ಮಗಳ ಬಗ್ಗೆ ಹೇಳುವ ಹೆಮ್ಮೆಯ ಮಾತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.