ನವದೆಹಲಿ: ಭಾರತ ಮತ್ತು ನೇಪಾಳದ ನಡುವಣ 3ನೇ ಸಮನ್ವಯ ಸಭೆ ಇಂದು ನವದೆಹಲಿಯಲ್ಲಿ ಜರುಗುತ್ತಿದೆ. ಇದರಲ್ಲಿ ಭಾಗಿಯಾಗುವ ಸಲುವಾಗಿ 7 ಸದಸ್ಯರನ್ನೊಳಗೊಂಡ ನಿಯೋಗ ಭಾರತಕ್ಕೆ ಆಗಮಿಸಿದೆ.
ನೇಪಾಳದ ಸಶಸ್ತ್ರ ಪೊಲೀಸ್ ಪಡೆ ಮಹಾ ನಿರ್ದೇಶಕ ಶೈಲೇಂದ್ರ ಖನಲ್ ಅವರು ನೇಪಾಳ ನಿಯೋಗದ ನೇತೃತ್ವವನ್ನು ವಹಿಸಿಕೊಂಡಿದ್ದಾರೆ.
ಸಭೆಯ ವೇಳೆ, ಗಡಿಯಲ್ಲಿನ ಭದ್ರತಾ ವ್ಯವಸ್ಥೆ, ಅಪರಾಧ ಮತ್ತು ಅಪರಾಧಿಗಳ ಬಗೆಗಿನ ಮಾಹಿತಿ ಹಂಚಿಕೆ, ಸೇನಾ ತರಬೇತಿ, ಪರಸ್ಪರ ದೇಶಗಳಿಗೆ ಅಧಿಕಾರಿಗಳ ಭೇಟಿ ಇತ್ಯಾದಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.
ಮಂಗಳವಾರ ನೇಪಾಳದ ನಿಯೋಗ ಕೇಂದ್ರ ಗೃಹ ಖಾತೆ ಕಾರ್ಯದರ್ಶಿ ರಾಜೀವ್ ಗೌಬ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.