ಒರಿಸ್ಸಾದ ನಕ್ಸಲ್ ಪೀಡಿತ ಮಲ್ಕನ್ಗಿರಿಯಲ್ಲಿ ಜುಲೈ 26ರಂದು ಉದ್ಘಾಟನೆಗೊಂಡ ಸೇತುವೆ ಸಂಪರ್ಕದಲ್ಲೇ ಇಲ್ಲದ 151 ಗ್ರಾಮಗಳನ್ನು ಮಲ್ಕನ್ಗಿರಿಯ ಪ್ರಮುಖ ಭಾಗದೊಂದಿಗೆ ಸಂಪರ್ಕಿಸಿದ್ದು ಮಾತ್ರವಲ್ಲ, ಯುವ ನಕ್ಸಲ್ ದಂಪತಿಗಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವಲ್ಲಿಯೂ ಯಶಸ್ವಿಯಾಗಿದೆ.
ತಲೆ ಮೇಲೆ ರೂ.5 ಲಕ್ಷ ಬಹುಮಾನವನ್ನು ಹೊಂದಿದ್ದ ವಾಗ ಉರ್ಮಾಮಿ ಮತ್ತು ಆತನ 20 ವರ್ಷದ ಪತ್ನಿ ಮುಡೆ ಮಧಿ ಅವರು ಈ ಸೇತುವೆ ನಿರ್ಮಾಣದ ಸಂದರ್ಭದಲ್ಲಿ ಅದರ ಭದ್ರತೆಗೆಂದು ನಿಯೋಜನೆಗೊಂಡಿದ್ದ ಭದ್ರತಾ ಪಡೆಯಿಂದಾಗಿ ಜುಲೈ 29ರಂದು ಶಸ್ತ್ರಾಸ್ತ್ರ ತ್ಯಾಗ ಮಾಡಿ ಹೊಸ ಜೀವನ ಆರಂಭಿಸಿದ್ದಾರೆ.
ಉರ್ಮಾಮಿ ಕನಿಷ್ಟ ಎಂದರೆ 26 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ, 7 ಕೊಲೆ ಪ್ರಕರಣಗಳನ್ನೂ ಇದು ಒಳಗೊಂಡಿದೆ. 16 ವರ್ಷ ವಯಸ್ಸಿನಲ್ಲಿ ನಕ್ಸಲ್ ಪಡೆ ಸೇರಿದ್ದ, 10 ವರ್ಷಗಳಿಂದ ಕಾಡಿನಲ್ಲೇ ನಕ್ಸಲ್ ಕ್ಯಾಂಪ್ಗಳಲ್ಲಿ ಬದುಕುತ್ತಿದ್ದ, ಈಗ ನಾಡಿನಲ್ಲಿ ಪತ್ನಿಯೊಂದಿಗೆ ಹೊಸ ಜೀವನ ಕಟ್ಟಿಕೊಳ್ಳುತ್ತಿದ್ದಾನೆ.
ಭದ್ರತಾ ಪಡೆಯ ಸಿಬ್ಬಂದಿ ಇವರಿಗೆ ಜೀವನ ರೂಪಿಸಲು ಸಹಕರಿಸುತ್ತಿದ್ದಾರೆ. ಒರಿಸ್ಸಾ ಭಾಷೆಯಲ್ಲಿ ಅಕ್ಷರವನ್ನೂ ಆತ ಕಲಿಯುತ್ತಿದ್ದಾನೆ.
ನಕ್ಸಲ್ ಪಡೆಗೆ ಯಾವುದೇ ಸಿದ್ಧಾಂತವಿಲ್ಲ, ಹಣದ ಕೊರತೆಯನ್ನು ಅದು ಎದುರಿಸುತ್ತಿದ್ದು, ನಕ್ಸಲರ ಪಾಡು ಅಧೋಗತಿಯತ್ತ ಸಾಗಿದೆ ಎಂದು ಉರ್ಮಾಮಿ ಹೇಳುತ್ತಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.