ಮುಂಬಯಿ: ವಿಶೇಷ ಚೇತನ ಸಿಬ್ಬಂದಿಗಳನ್ನೇ ನೇಮಿಸುವ ಮೂಲಕ ಮುಂಬಯಿಯ ಕೆಫೆಯೊಂದು ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನವನ್ನು ಮಾಡಿದೆ.
ಜುಹು ಏರಿಯಾದಲ್ಲಿ ಯಶ್ ಚಾರಿಟೇಬಲ್ ಟ್ರಸ್ಟ್ ವಿಶೇಷ ಚೇತನರಿಗೆ ಸಹಾಯಕವಾಗಲೆಂದೇ ‘ಅರ್ಪಣ್ ಕೆಫೆ’ಯನ್ನು ಆರಂಭಿಸಿದ್ದು, ಎಲ್ಲಾ 13 ಸಿಬ್ಬಂದಿಗಳು ವಿಕಲಚೇತನರೇ ಆಗಿದ್ದಾರೆ.
ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಇದು ಕಾರ್ಯನಿರ್ವಹಿಸುತ್ತಿದ್ದು, ಹೋಂ ಡೆಲಿವರಿ ಸೌಲಭ್ಯ ಕೂಡ ಇದರಲ್ಲಿದೆ. ಬರ್ಗರ್, ಕಾಫಿ, ಪಿಝಾಗಳ ತಯಾರಿಕೆಯನ್ನೂ ಇಲ್ಲಿ ವಿಶೇಷ ಚೇತನರೇ ಮಾಡುತ್ತಾರೆ.
ಕೆಫೆಯ ಸಮಾಜಮುಖಿ ಕಾರ್ಯವನ್ನು ಗ್ರಾಹಕರು ಸ್ವಾಗತಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿ ಆಹಾರ ಸೇವಿಸುತ್ತಾರೆ.
ಮೊದಮೊದಲು ಗ್ರಾಹಕರು ಮತ್ತು ಸಿಬ್ಬಂದಿಗಳ ನಡುವೆ ಸಂಪರ್ಕ ಸಾಧಿಸಲು ತುಸು ಕಷ್ಟವಾಯಿತಾದರು ಈಗ ಎಲ್ಲವೂ ಸುಲಲಿತವಾಗಿ ನಡೆಯುತ್ತಿದೆ, ಗ್ರಾಹಕರಿಂದ ಉತ್ತಮ ಬೆಂಬಲವೂ ದೊರೆಯುತ್ತಿದೆ ಎನ್ನುತ್ತಾರೆ ಯಶ್ ಚಾರಿಟೇಬಲ್ನ ಟ್ರಸ್ಟಿ ಸುಷ್ಮಾ ನಗರ್ಕರ್ ಹೇಳಿದ್ದಾರೆ.
ಸಾಮರ್ಥ್ಯವಿದ್ದರೂ ಅವಕಾಶಗಳು ಸಿಗದ ಹಿನ್ನಲೆಯಲ್ಲಿ ವಿಕಲಚೇತನರು ಹಿಂದುಳಿಯುತ್ತಾರೆ. ಇದನ್ನು ಮನಗಂಡು ಯಶ್ ಸಂಸ್ಥೆ ಅವರಿಗೆಂದೇ ವಿಶೇಷ ಕೆಫೆ ಸ್ಥಾಪನೆ ಮಾಡಿದ್ದು ಶ್ಲಾಘನಾರ್ಹ ಕಾರ್ಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.