ನವದೆಹಲಿ: ‘GiftsOnAir’ 2018ರ ಅತ್ಯುತ್ತಮ ಸ್ಟಾರ್ಟ್ಅಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಫ್ಲೈನ್ ಮತ್ತು ಆನ್ಲೈನ್ ವ್ಯಾಪಾರದ ನಡುವಣ ಅಂತರವನ್ನು ಕುಗ್ಗಿಸುವ ಮಹತ್ವಾಕಾಂಕ್ಷೆ ಹೊಂದಿರುವ ಇದು ಅತ್ಯಂದ ನಾವೀಣ್ಯಪೂರ್ಣ ಸ್ಟಾರ್ಟ್ಅಪ್ ಎಂದೆನಿಸಿಕೊಂಡಿದೆ.
ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ 2018ರ ಜನವರಿಯಲ್ಲಿ, ಸಾರ್ಥಕ್ ಖಂಡೇಲ್ವಾಲ, ಶೋಭಿತ್ ಜಲಾನಿ ಮತ್ತು ಅಪೂರ್ವ ಪಾಂಡೆ ಎಂಬ ಯುವಕರು ಈ ಸ್ಟಾರ್ಟ್ಅಪ್ಗೆ ಚಾಲನೆ ನೀಡಿದ್ದರು. ಈಗಾಗಲೇ ಈ ಸಂಸ್ಥೆ ಮೆಟ್ರೋ ನಗರಗಳ ಜನರ ವಿಶ್ವಾಸವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಈ ಸಂಸ್ಥೆ ಆಫ್ಲೈನ್ನಲ್ಲಿನ ಪ್ರತಿ ಖರೀದಿಗೂ ಆಫರ್ ನೀಡುತ್ತದೆ, ಈ ಆಫರ್ನ್ನು ಪ್ರತಿಯೊಬ್ಬರೂ ಆನ್ಲೈನ್ ಮೂಲಕವೇ ರಿಡೀಮ್ ಮಾಡಬೇಕಾಗುತ್ತದೆ. ಖರೀದಿದಾರರಿಗೆ ನೀಡುವ ಗಿಫ್ಟ್ ವೋಚರ್ಗಳನ್ನು ಆನ್ಲೈನ್ ಮೂಕವೇ ರಿಡೀಮ್ ಮಾಡಬೇಕು, ಇದರಿಂದ ಆಫ್ಲೈನ್ ಮತ್ತು ಆನ್ಲೈನ್ ನಡುವಣ ಅಂತರವನ್ನು ಕುಗ್ಗಿಸಿದಂತಾಗುತ್ತದೆ. ಎರಡೂ ವಿಧಾನಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂಬುದು ಸಂಸ್ಥೆಯ ಆಶಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.