ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಉತ್ತರಪ್ರದೇಶದ ಶಹಜಹಾನ್ಪುರದಲ್ಲಿ ರೈತ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
‘ನಾವು ನಿಮ್ಮ ಬಳಿಗೆ ವಿದ್ಯುತ್ ನೀಡಲು ಧಾವಿಸುತ್ತೇವೆ, ಆದರೆ ಅವರು(ಕಾಂಗ್ರೆಸ್) ಅವಿಶ್ವಾಸ ಪತ್ರ ಹಿಡಿದು ನಮ್ಮ ಬಳಿಗೆ ಧಾವಿಸುತ್ತಿದ್ದಾರೆ. ನಿನ್ನೆ ಲೋಕಸಭಾದಲ್ಲಿ ಏನು ಮಾಡಬೇಕೋ ಅದನ್ನು ಮಾಡಿದ್ದೇನೆ. ನೀವು ನೋಡಿದ್ದೀರಿಯಲ್ಲಾ ಅವರು ಹೇಗೆ ನನ್ನ ಬಳಿ ಓಡಿ ಬಂದರು ಎಂದು, ಅವರ ಕಣ್ಣು ಇದ್ದದ್ದು ನನ್ನ ಪ್ರಧಾನಿ ಕುರ್ಚಿಯ ಮೇಲೆ’ ಎಂದರು.
‘ಅವಿಶ್ವಾಸಕ್ಕೆ ಕಾರಣ ನೀಡುವಂತೆ ಕೇಳಿದೆ, ಆದರೆ ಅವರು ಪ್ರತಿಕ್ರಿಯೆ ನೀಡಲು ಸಾಧ್ಯವಾಗದೆ ನನ್ನ ಬಳಿ ಓಡಿ ಬಂದು ತಬ್ಬಿಕೊಂಡರು, ಜನರು ನನ್ನೊಂದಿಗೆ ಇರುವ ತನಕ ನನ್ನನ್ನು ಯಾರೂ ಏನು ಮಾಡಲು ಸಾಧ್ಯವಿಲ್ಲ. ಜನರ ಸಹಕಾರ ಇದ್ದದರಿಂದ ವಿಶ್ವಾಸ ಗೆದ್ದೆವು’ ಎಂದರು.
ಯಾವಾಗ ಹಲವು ಪಕ್ಷಗಳು ಒಂದುಗೂಡುತ್ತವೆಯೋ ಆವಾಗ ಹೆಚ್ಚು ಕೆಸರು ಸೃಷ್ಟಿಯಾಗುತ್ತದೆ, ಕಮಲ ಉದಯಿಸುತ್ತದೆ ಎಂದರು.
ಸಕ್ಕರೆ ಆದಾಯದ ಶೇ.80ರಷ್ಟನ್ನು ರೈತರ ಏಳಿಗೆಗೆ ಬಳಸಲು ನಿರ್ಧಾರ ಮಾಡಿದ್ದೇ, 14 ಇತರ ಬೆಳೆಗಳ ಬೆಂಬಲ ಬೆಲೆಯಲ್ಲಿ ರೂ.200ರಿಂದ ರೂ.1800ಕ್ಕೆ ಏರಿಕೆ ಮಾಡಿದ್ದೇವೆ ಎಂದು ಮೋದಿ ಹೇಳಿದರು.
ಕಾಂಗ್ರೆಸ್ ರೈತರ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸುತ್ತದೆ, ಕಳೆದ 70 ವರ್ಷದಲ್ಲಿ ಅವರು ರೈತರಿಗಾಗಿ ಏನೂ ಮಾಡಿಲ್ಲ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.