ಮುಂಬಯಿ: 13 ವರ್ಷದ ಮುಂಬಯಿಯ ಬಾಲಕನೊಬ್ಬ ಅಪ್ಲಿಕೇಶನ್ ಆಧಾರಿತ ಕೊರಿಯರ್ ಸರ್ವಿಸ್ನ್ನು ಆರಂಭಿಸಿದ್ದು, ರಿಯಲ್ ಟೈಮ್ ಟ್ರ್ಯಾಕಿಂಗ್ ಸೇವೆ ಒದಗಿಸಲಿದೆ. ಇದು ಮಾಯಾನಗರಿಯ ಜನಪ್ರಿಯ ‘ಡಬ್ಬಾವಾಲಾ’ಗಳಿಗೆ ಪ್ರಯೋಜನಕಾರಿಯಾಗಲಿದೆ.
ತಿಲಕ್ ಮೆಹ್ತಾ ಎಂಬ ಬಾಲಕ ‘ಪೇಪರ್ಸ್ ಎನ್ ಪಾರ್ಸೆಲ್ಸ್’ ಎಂಬ ಈ ಸ್ಟಾರ್ಟ್ಅಪ್ನ್ನು ಆರಂಭಿಸಿದ್ದು, ಸಣ್ಣ ಪಾರ್ಸೆಲ್, ಟಿಫಿನ್ ಮತ್ತು ಮುಖ್ಯ ದಾಖಲೆಗಳ ಸಾಗಾಣೆಗೆ ಬಹಳಷ್ಟು ಪ್ರಯೋಜನಕಾರಿ ಎನಿಸಿದೆ.
ಮಾವನ ಮನೆಯಲ್ಲಿ ಪುಸ್ತಕ ಬಿಟ್ಟು ಬಂದಿದ್ದ ತಿಲಕ್ ಮೆಹ್ತಾ, ಅದನ್ನು ತರಲು ಕೊರಿಯರ್ ಸೇವೆಗಳಿಗಾಗಿ ಎದುರು ನೋಡಿದ್ದ. ಆದರೆ ಅಂತಹ ಯಾವುದೇ ಸೇವೆ ಆತನಿಗೆ ಸಿಗಲಿಲ್ಲ. ಸಿಕ್ಕರೂ ಅದರ ಬೆಲೆ ರೂ.200-250 ಆಗಿತ್ತು. ಇದರಿಂದಾಗಿ ಅಪ್ಲಿಕೇಶನ್ ಆಧಾರಿತ ಕೊರಿಯರ್ ಸೇವೆ ಆರಂಭಿಸುವ ಐಡಿಯಾ ಆತನಿಗೆ ಹೊಳೆಯಿತು.
ಅಪ್ಲಿಕೇಶನ್ ಮತ್ತು ಈತನ ವೆಬ್ಸೈಟ್ಗೆ ರಿಜಿಸ್ಟರ್ ಆಗಿ ಯಾರೂ ಬೇಕಾದರೂ ಪಾರ್ಸೆಲ್ಗೆ ಆರ್ಡರ್ ಮಾಡಬಹುದಾಗಿದೆ. ಈತ ತನ್ನ ಸೇವೆಗಳಿಗೆ ಡಬ್ಬಾವಾಲಾಗಳನ್ನೂ ಒಳಪಡಿಸಿದ್ದಾನೆ. ಇದರಿಂದ ಅವರ ಆದಾಯವೂ ಹೆಚ್ಚಳವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.