ನವದೆಹಲಿ: ಮುಂಗಾರು ಅಧಿವೇಶನದ ಮೊದಲ ದಿನವಾದ ಇಂದು, ಪ್ರಧಾನಿ ನರೇಂದ್ರ ಮೋದಿಯವರು ಕಲಾಪ ಸುಗುಮವಾಗಿ ನಡೆಯುವುದಕ್ಕೆ ಸಹಕರಿಸುವಂತೆ ಎಲ್ಲಾ ಪಕ್ಷಗಳಿಗೆ ಮನವಿ ಮಾಡಿದರು.
ಎಲ್ಲಾ ಪಕ್ಷಗಳು ಸದನದಲ್ಲಿ ಎತ್ತುವ ಪ್ರತಿ ಪ್ರಶ್ನೆಗಳಿಗೂ ಉತ್ತರ ನೀಡಲು ಕೇಂದ್ರ ಸಿದ್ಧವಿದೆ ಎಂದ ಅವರು, ಈ ಬಾರಿ ಅಧಿವೇಶನ ಫಲದಾಯವಾಗಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.
‘ಮುಂಗಾರು ಅಧಿವೇಶನ ಫಲದಾಯಕವಾಗಲಿದೆ ಮತ್ತು ಪ್ರಮುಖ ವಿಷಯಗಳ ಚರ್ಚೆಗೆ ಸಮಯವನ್ನು ಸಮರ್ಪಕವಾಗಿ ಸದುಪಯೋಗಪಡಿಸಲಾಗುತ್ತದೆ ಎಂದು ನಂಬಿದ್ದೇನೆ. ಈ ಅಧಿವೇಶನದ ಫಲಪ್ರದ ಮತ್ತು ಶ್ರೀಮಂತ ಮಟ್ಟದ ಚರ್ಚೆಗಳು ಮುಂಬರುವ ಅಧೀವೇಶನಗಳಿಗೂ ಮಾದರಿಯಾಗಲಿ’ ಎಂದಿದ್ದಾರೆ.
ಯಾವುದೇ ಪಕ್ಷದ ಯಾವುದೇ ಸದಸ್ಯ ಏನೇ ಪ್ರಶ್ನೆ ಕೇಳಿದರೂ ಅದರ ಬಗ್ಗೆ ಸಮರ್ಪಕ ಚರ್ಚೆ ನಡೆಸಲು ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.