“ಏಳು ಸ್ವರವು ಸೇರಿ ಸಂಗೀತವಾಯಿತು ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು” ಈ ಹಾಡು ನೆನಪಿದೆ ಅಲ್ವೇ! ಬಿಳಿಯ ಬಣ್ಣ ಆಗಬೇಕಾದರೆ 7 ಬಣ್ಣಗಳು ಸೇರಿದಾರೆ ಮಾತ್ರ ಸಾಧ್ಯವಾಗುವುದು. ಇದು ಎಲ್ಲರಿಗೂ ಗೊತ್ತಿರುವ ಸಂಗತಿ ಇದರಲ್ಲೇನು ವಿಶೇಷ ಎಂದು ಯೋಚಿಸುವಿರಾ??? 7 ಬಣ್ಣವೆನೋ ಸರಿ ಅದನ್ನು ಕಂಡುಹಿಡಿದಿದ್ದು ಯಾರು? ಈ ವಿಷಯ ಜನರಿಗೆ ತಿಳಿದಿದ್ದಾದರೂ ಹೇಗೆ ಎಂಬುದೇ ಇಂದಿನ ಭಾರತ ವೈಭವ….
ನಮ್ಮ ಪೂರ್ವಜರು ಎಷ್ಟು ಬುದ್ಧಿವಂತರಾಗಿದ್ದರೆಂದರೆ ವೇದದ ಕಾಲದಲ್ಲಿಯೇ ಇದನ್ನು ತಿಳಿದು ಅದರಲ್ಲಿ ಆದಿತ್ಯ ಹೃದಯ ಹಾಗು ಅಥರ್ವ ವೇದದಲ್ಲಿ ಇದರ ಕುರಿತಂತೆ ವಿಜ್ಞಾನದ ಉಲ್ಲೇಖವಿದೆ. “ಸಪ್ತ ತ್ವಾ ಹರಿತೋ ರಥೇ ವಹಂತಿ ದೇವ ಸೂರ್ಯ ಸೌಚಿಕ್ಷೇಷಂ ವಿಚಕ್ಷಣ| ಏಳು ಅಶ್ವಗಳ ರಥದ ಮೇಲೆ ಸೂರ್ಯದೇವನು ಸಂಚಲಿಸುವನು.
ಅಥರ್ವ ವೇದದ ಸಾಲೊಂದು ಹೀಗೆ ತಿಳಿಸುತ್ತದೆ….
ಅವ ದಿವಸ್ತಾರಯಂತಿ ಸಪ್ತ ಸೂರ್ಯಸ್ಯ ರಶ್ಮ್ಯಃ||
ಸೂರ್ಯನ ಏಳು ಬಣ್ಣದ ಕಿರಣಗಳು ದಿನವೊಂದರ ಪ್ರತೀಕ.
ಹಾಗಾದರೆ ಸೂರ್ಯನಿಗೆ ಕೇವಲ ಏಳು ಕಿರಣಗಳಾ ಎಂದು ಕೇಳಿದ್ರೆ ಸೂರ್ಯನಿಗೆ ಆನೇಕ ಸಾವಿರ ಕಿರಣಗಳಿದ್ದು ಅದರಲ್ಲಿ ಏಳು ಮುಖ್ಯವಾದವು.
ಆದಿತ್ಯ ಹೃದಯದಲ್ಲಿ ಸಪ್ತ ಅಶ್ವ ರೂಢ ಎಂಬ ಉಲ್ಲೇಖವಿದೆ ಅಶ್ವ ಅಂದರೆ ಕುದುರೆ ಮಾತ್ರವಲ್ಲ ಸೂರ್ಯನ ಕಿರಣ ಎಂಬ ಅರ್ಥವೂ ಇದೆ. ಹಾಗಾಗಿ ಸಪ್ತ ಕಿರಣಗಳ ಕೂಡಿದ ಎಂಬ ಅರ್ಥ ಬರುತ್ತದೆ.
ಇದರರ್ಥ ಸೂರ್ಯನ ಬೆಳಕು ಕೇವಲ ಒಂದಾಗಿದೆ (ಶ್ವೇತ ಬಣ್ಣದಾಗಿದ್ದು ಕನ್ನಡಿಯ ಮುಂದೆ ಹಾದುಹೋದಾಗ ಅದು 7 ಬಣ್ಣಗಳಾಗಿ ಹರಡುತ್ತದೆ. ಹಾಗಾಗಿಯೇ ಮಳೆ ಬಂದು ನಿಂತ ತಕ್ಷಣ ಸೂರ್ಯನ ಬೆಳಕು ಬಂದರೆ ಕಾಮನಬಿಲ್ಲು ಕಾಣುವುದು. ಛಾಂದೋಗ್ಯ ಉಪನಿಷತ್ತಿನಲ್ಲಿ ಸೂರ್ಯನ ಕಿರಣವು ಹಳದಿ ಕೆಂಪು ಮತ್ತು ನೀಲವರ್ಣಗಳ ಸಂಗಮ ಎಂಬ ಉಲ್ಲೇಖವಿದೆ. ನ್ಯೂಟನ್ ಮುಚಿತವಾಗಿ ಪ್ರಾಚೀನಭಾರತಿಯ ವೇದ ಜ್ಞಾನವು ಸೂರ್ಯನ ಬೆಳಕು ಏಳು ಬಣ್ಣಗಳನ್ನು ಹೊಂದಿರುತ್ತದೆ ಎಂದು ಬಹಿರಂಗ ಪಡಿಸಿತ್ತು. ಸಾವಿರಾರು ವರ್ಷಗಳ ನಂತರ ಈಗ ವಿಜ್ಞಾನಿಗಳು ಇದನ್ನು ಒಪ್ಪುತ್ತಿದ್ದಾರೆ ಹಾಗು ಭಾರತೀಯರು ಇದನ್ನು ಮೊದಲೇ ತಿಳಿದಿದ್ದರು ಎಂದು ತಿಳಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.