ಗಡ್ಚಿರೋಲಿ: ಸಿಪಿಐ/ಮಾವೋವಾದಿಗಳ ಪಾಲಿಟ್ಬ್ಯೂರೋ ಸದಸ್ಯ ಸೋನು ಅಲಿಯಾಸ್ ಮಲ್ಲೌಜುಲ ವೇಣುಗೋಪಾಲ್ ರಾವ್ ಇಂದು 60 ನಕ್ಸಲರೊಂದಿಗೆ ಇಂದು ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಅಧಿಕಾರಿಗಳ ಮುಂದೆ ಶರಣಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಪೊಲೀಸರು ನಡೆಸಿದ ನಿರಂತರ ಬಂಡಾಯ ನಿಗ್ರಹ ಕಾರ್ಯಾಚರಣೆಗಳ ನಂತರ ನಕ್ಸಲರ ಶರಣಾಗತರಾಗುವ ಬೆಳವಣಿಗೆ ಹೆಚ್ಚುತ್ತಿದ್ದು, ಇದು ಹಿಂಸೆಯನ್ನೇ ಜೀವನೋಪಾಯವಾಗಿಸಿರುವ ಸಿಪಿಐ/ಮಾವೋವಾದಿಗಳಿಗೆ ದೊಡ್ಡ ಹಿನ್ನಡೆಯಾಗಿದೆ.
ಸೆಪ್ಟೆಂಬರ್ನಲ್ಲಿ, ಸೋನು ಶಸ್ತ್ರಾಸ್ತ್ರಗಳನ್ನು ತ್ಯಜಿಸುವ ಉದ್ದೇಶವನ್ನು ಸೂಚಿಸುವ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದ ಮತ್ತು ತರುವಾಯ ಅವನು ಛತ್ತೀಸ್ಗಢ ಮತ್ತು ಇತರ ಪ್ರದೇಶಗಳಿಂದ ಗಣನೀಯ ಸಂಖ್ಯೆಯ ಮಾವೋವಾದಿ ಕಾರ್ಯಕರ್ತರ ಬೆಂಬಲವನ್ನು ಪಡೆದು ಶರಣಾಗುವ ನಿರ್ಧಾರವನ್ನು ತೆಗದುಕೊಂಡಿದ್ದಾನೆ.
ಈ ಶರಣಾಗತಿಯನ್ನು ಕಾನೂನು ಜಾರಿ ಸಂಸ್ಥೆಗಳಿಗೆ ಒಂದು ಪ್ರಮುಖ ಯಶಸ್ಸು ಎಂದು ಅಧಿಕಾರಿಗಳು ಬಣ್ಣಿಸಿದ್ದಾರೆ, ಮಾವೋವಾದಿ ದಂಗೆಯನ್ನು ದುರ್ಬಲಗೊಳಿಸಲು ಮತ್ತು ಉಗ್ರಗಾಮಿಗಳನ್ನು ಮುಖ್ಯವಾಹಿನಿಗೆ ತರುವ ಅವರ ನಿರಂತರ ಪ್ರಯತ್ನಗಳಿಂದ ಇದು ಸಾಧ್ಯವಾಗಿದೆ. ಈ ಶರಣಾಗತಿಯು ಎಡಪಂಥೀಯ ಉಗ್ರವಾದದ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಗಳನ್ನು ಬಲಪಡಿಸುತ್ತದೆ. ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆ ಬಹಳ ಹಿಂದಿನಿಂದಲೂ ಮಾವೋವಾದಿ ಚಟುವಟಿಕೆಯ ಭದ್ರಕೋಟೆಯಾಗಿದ್ದು, ಇಂದಿನ ಶರಣಾಗತಿಯು ಭಾರತದ ಆಂತರಿಕ ಉಗ್ರವಾದದ ವಿರುದ್ಧದ ಹೋರಾಟದಲ್ಲಿ ಗಮನಾರ್ಹ ಮೈಲಿಗಲ್ಲಾಗಿದೆ.
ಛತ್ತೀಸ್ಗಢದಲ್ಲಿ 16 ನಕ್ಸಲರು ಶರಣಾಗಿದ್ದಾರೆ. ಅಕ್ಟೋಬರ್ 8 ರಂದು ಛತ್ತೀಸ್ಗಢದ ನಾರಾಯಣಪುರ ಜಿಲ್ಲೆಯಲ್ಲಿ ಒಂಬತ್ತು ಮಂದಿ ಒಟ್ಟು 48 ಲಕ್ಷ ರೂ.ಗಳ ಬಹುಮಾನವನ್ನು ಹೊಂದಿದ್ದವರು ಸೇರಿದಂತೆ 16 ನಕ್ಸಲರು ಶರಣಾದ ನಂತರ ರಾವ್ ಅವರ ಶರಣಾಗತಿಯಾಗಿದೆ. ಏಳು ಮಹಿಳೆಯರು ಸೇರಿದಂತೆ ಈ ಗುಂಪು ಹಿರಿಯ ಪೊಲೀಸ್ ಅಧಿಕಾರಿಗಳ ಮುಂದೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮಾವೋವಾದಿ ಸಿದ್ಧಾಂತದ ಬಗ್ಗೆ ಭ್ರಮನಿರಸನ ವ್ಯಕ್ತಪಡಿಸಿದ್ದಾರೆ.
Malloujula Venugopal Rao @ Sonu, Polit Bureau member of CPI/Maoist, laid down weapons along with 60 Maoist cadres today in Gadhchiroli, Maharashtra. This is a major blow to CPI/Maoist and is a result of sustained operations by police under the leadership of Union HM Amit Shah and… pic.twitter.com/rUXabMQMiJ
— ANI (@ANI) October 14, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.