ನವದೆಹಲಿ: ರಕ್ಷಣಾ ವೇತನಾ ಪ್ಯಾಕೇಜ್ಗೆ ಸಂಬಂಧಪಟ್ಟಂತೆ ಭಾರತೀಯ ಸೇನೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಎಸ್ಬಿಐ ಮತ್ತು ಭಾರತೀಯ ಸೇನೆಯ ನಡುವೆ 2011ರಲ್ಲಿ ವೇತನಾ ಪ್ಯಾಕೇಜ್ ಒಪ್ಪಂದ ನಡೆದಿತ್ತು, ಅದನ್ನು 2015ರ ಫೆ.23ರಂದು ನವೀಕರಣಗೊಳಿಸಲಾಗಿತ್ತು, ಇದಕ್ಕೆ ಗುರುವಾರ ಮತ್ತೆ ಹೊಸದಾಗಿ ಪರಿಷ್ಕೃತ ಒಪ್ಪಂದಕ್ಕೆ ಸಹಿ ಬಿದ್ದಿದೆ.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಯೋಧರ, ಪಿಂಚಣಿದಾರರ ಮತ್ತು ಅವರ ಕುಟುಂಬದವರ ಅನುಕೂಲಕ್ಕೆ ತಕ್ಕಂತೆ ಹೊಸ ಒಪ್ಪಂದವನ್ನು ಪರಿಷ್ಕರಣೆ ಮಾಡಲಾಗಿದೆ. ಹೆಚ್ಚುವರಿಯಾಗಿ ಹಲವಾರು ಸೌಲಭ್ಯಗಳನ್ನು ಅಳವಡಿಸಲಾಗಿದೆ, ಉಚಿತ ವೈಯಕ್ತಿಕ ಅಪಘಾತ ಮರಣ ವಿಮೆ, ಉಚಿತ ಶಾಶ್ವತ ಸಂಪೂರ್ಣ ಅಶಕ್ತ ವಿಮೆ ಮತ್ತು ಮರಣ ಹೊಂದಿದ ಯೋಧರ ಕುಟುಂಬಗಳಿಗೆ ಹಲವಾರು ಅಪಘಾತ ಸಂಬಂಧೀ ಸೌಲಭ್ಯಗಳನ್ನು ಅಳವಡಿಸಲಾಗಿದೆ.
ಈ ಒಪ್ಪಂದ 2019ರ ಜನವರಿ 3ರವರೆಗೆ ಚಾಲ್ತಿಯಲ್ಲಿರಲಿದೆ, ಬಳಿಕ ಅದನ್ನು ಮತ್ತೆ ನವೀಕರಣ ಮಾಡಿ ಮುಂದುವರೆಸಬೇಕಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.