ಕಾಂಗ್ರೆಸ್ ಸರಕಾರದ 10 ವರ್ಷಗಳ ಅವಧಿಯಲ್ಲಿ ಬಂದ ವಿದೇಶೀ ಹೂಡಿಕೆಗಿಂತ ಹೆಚ್ಚು ವಿದೇಶೀ ಹೂಡಿಕೆಯನ್ನು 4 ವರ್ಷದ ಆಡಳಿತದಲ್ಲೇ ಮೋದಿ ಸರಕಾರ ತಂದಿದೆ.
ಮೋದಿ ಸರಕಾರದ 4 ವರ್ಷದ ಆಡಳಿತದ ಅವಧಿಯಲ್ಲಿ ಯು ಪಿ ಎ 1 ಹಾಗೂ ಯು ಪಿ ಎ 2 ಸೇರಿದಂತೆ 10 ವರ್ಷಗಳ ಆಡಳಿತದ ಅವಧಿಯಲ್ಲಿ ಭಾರತಕ್ಕೆ ಬಂದ ವಿದೇಶೀ ನೇರ ಹೂಡಿಕೆಗಿಂತ ಹೆಚ್ಚು ಮೊತ್ತದ ವಿದೇಶೀ ನೇರ ಹೂಡಿಕೆಯಾಗಿದೆ. 2014-15 ರಿಂದ 2017-18 ರ ನಾಲ್ಕು ವರ್ಷಗಳ ಆಡಳಿತದಲ್ಲಿ ಭಾರತಕ್ಕೆ 222.89 ಬಿಲಿಯನ್ ಅಮೇರಿಕನ್ ಡಾಲರ್ ( 1$=ರೂ 68 ರಂತೆ 15. 16 ಲಕ್ಷ ಕೋಟಿ ರೂಪಾಯಿಗಳು) ಮೊತ್ತದ ವಿದೇಶೀ ಹೂಡಿಕೆ ಹಣವು ಭಾರತಕ್ಕೆ ಹರಿದು ಬಂದಿದೆ. ಆದರೆ 2004-05 ರಿಂದ 2013-14 ರ ಕಾಂಗ್ರೆಸ್ ಆಡಳಿತದ 10 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಹೂಡಿಕೆಯಾದ ವಿದೇಶೀ ಬಂಡವಾಳವು 220.34 ಬಿಲಿಯನ್ ಡಾಲರ್( 1$=ರೂ 68 ರಂತೆ 14.98 ಲಕ್ಷ ಕೋಟಿ ರೂಪಾಯಿಗಳು) ಗಳಾಗಿವೆ .
ಮೋದಿ ಸರಕಾರವು ಆಡಳಿತಕ್ಕೆ ಬಂದ ನಂತರ ವರ್ಷದಿಂದ ವರ್ಷಕ್ಕೆ ದಾಖಲೆಯ ವಿದೇಶೀ ಹೂಡಿಕೆಯನ್ನು ಆಕರ್ಷಿಸುತ್ತಲೇ ಸಾಗಿತು. ಕಾಂಗ್ರೆಸ್ ಆಡಳಿತದ ಕೊನೆಯ ವರ್ಷ 2013-14 ರಲ್ಲಿ ದೇಶದಲ್ಲಿ ಆದ ವಿದೇಶೀ ನೇರ ಹೂಡಿಕೆಯು 36.50 ಬಿಲಿಯನ್ ಅಮೇರಿಕನ್ ಡಾಲರ್ಗಳಾದರೆ, ಬಿಜೆಪಿ ಸರಕಾರದ ಆಡಳಿತಕ್ಕೆ ಬಂದ ನಂತರ ಮೊದಲ ವರ್ಷದಲ್ಲಿ ಅಂದರೆ 2014-15 ರಲ್ಲಿ 45.15 ಬಿಲಿಯನ್ ಡಾಲರ್, 2015-16 ರಲ್ಲಿ 55.56 ಬಿಲಿಯನ್ ಡಾಲರ್ , 2016-17 ರಲ್ಲಿ 60.22 ಬಿಲಿಯನ್ ಡಾಲರ್ ಹೂಡಿಕೆ ಆದರೆ 2017-18 ರಲ್ಲಿ ಅದು 61.96 ಬಿಲಿಯನ್ ಡಾಲರ್ಗಳಿಗೆ ಏರಿದೆ. 2018-19 ರಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿದೇಶೀ ಹೂಡಿಕೆಯಾಗಲಿದೆ.
ಮೋದಿ ಸರಕಾರದ ಅವಧಿಯಲ್ಲಿ
ಭಾರತದಲ್ಲಿ ಕಡಿಮೆಯಾದ ಭ್ರಷ್ಟಾಚಾರ, ರಸ್ತೆ ವಿದ್ಯುತ್ನಂತಹ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಸಮರ್ಥ ನಾಯಕತ್ವ, ಉತ್ತಮ ಆರ್ಥಿಕ ನೀತಿ, ಚತುರ ವಿದೇಶಾಂಗ ನೀತಿಗಳು ಈಸ್ ಆಪ್ ಡೂಯಿಂಗ್ ಬಿಸಿನೆಸ್ (Ease of Doing Business) ಪಟ್ಟಿಯಲ್ಲಿ 142 ನೇ ಸ್ಥಾನಕ್ಕೆ ಕುಸಿದಿದ್ದ ಭಾರತವನ್ನು 100 ನೇ ಸ್ಥಾನಕ್ಕೆ ಏರಿಸಿದವು. ವಿವಿಧ ದೇಶಗಳನ್ನು ಸುತ್ತಿ ಅಲ್ಲಿನ ನಾಯಕರು ಹಾಗೂ ಹೂಡಿಕೆದಾರರನ್ನು ಮನವೊಲಿಸಿ ಭಾರತದಲ್ಲಿ ಹೂಡಿಕೆ ಮಾಡುವಂತೆ ಪ್ರೋತ್ಸಾಹಿಸುವ ಕೆಲಸವನ್ನು ಭಾರತ ಸರಕಾರವು ಮಾಡುತ್ತಿದೆ.
ಕಳೆದ 3 ವರ್ಷಗಳಿಂದ ಭಾರತವು ಸತತವಾಗಿ ವಿಶ್ವದ ಹೂಡಿಕೆದಾರರ ಅತೀ ಫೇವರಿಟ್ ಟಾಪ್ 10 ದೇಶಗಳ ಪಟ್ಟಿಯಲ್ಲಿ ಸ್ಥಾನಗಳಿಸುತ್ತಿದೆ.
ಮೇಕ್ ಇನ್ ಇಂಡಿಯಾ ಯೋಜನೆಯಂತಹ ಪ್ರೋತ್ಸಾಹದಿಂದ ಉತ್ಸಾಹಿತರಾದ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಲು ಅತೀ ಆಸಕ್ತಿಯನ್ನು ತೋರುತ್ತಿದ್ದಾರೆ. ಹೆಚ್ಚಿದ ಹೂಡಿಕೆಯು ಭಾರತದ ಜನತೆಗೆ ಉದ್ಯೋಗಾವಕಾಶವನ್ನೂ ಹೆಚ್ಚಿಸಿದೆ ಹಾಗೂ ದೇಶದ ಆರ್ಥಿಕ ಹಾಗೂ ಔದ್ಯಮಿಕ ಬೆಳವಣಿಗೆಗೂ ಕಾರಣವಾಗಿದೆ.
ಈ ಬೆಳವಣಿಗೆಗಳು ಮೋದಿಯ ವಿದೇಶ ಯಾತ್ರೆಯನ್ನು ಪ್ರಶ್ನಿಸುವವರಿಗೆ ಉತ್ತರವನ್ನು ಕೂಡಾ ಕೊಟ್ಟಿವೆ .
https://www.corporate-cases.com/2016/10/year-wise-fdi-inflows-in-india.html?m=1
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.