ನವದೆಹಲಿ: ತೆಹ್ರಾನ್ಗೆ ಯುಎಸ್ ಅನುದಾನ ನವೀಕರಣಗೊಂಡ ಬೆದರಿಕೆಯ ನಡುವೆಯೂ ಇರಾನ್ನಲ್ಲಿ ಚಾಬಹಾರ್ ಬಂದರನ್ನು 2019ರ ವೇಳೆಗೆ ಕಾರ್ಯಾರಂಭಗೊಳಿಸಲು ಭಾರತ ಪ್ರಯತ್ನಿಸುತ್ತಿದೆ.
ಇರಾನ್ನ ಚಾಬಹಾರ್ ಬಂದರಿನ ಸಂಕೀರ್ಣವನ್ನು ನೂತನ ಟ್ರಾನ್ಸ್ಪೋರ್ಟೆಶನ್ ಕಾರಿಡಾರ್ ಭಾಗವಾಗಿ ಭಾರತದ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ಉಭಯ ದೇಶಗಳ ನಡುವೆ ಮಿಲಿಯನ್ ಡಾಲರ್ ವ್ಯವಹಾರದ ಬಾಗಿಲು ತೆರೆಯಲಿದೆ, ಅಲ್ಲದೇ ಪಾಕಿಸ್ಥಾನಕ್ಕೆ ಅವಲಂಬಿತಗೊಳ್ಳುವುದು ತಪ್ಪುತ್ತದೆ.
ಈ ಬಂದರಿನಿಂದಾಗಿ ಸಿಐಎಸ್ ರಾಷ್ಟ್ರಗಳಿಗೆ ಸುಲಲಿತ ಲಭ್ಯತೆ ಸಿಗಲಿದೆ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಅಭಿಪ್ರಾಯಿಸಿದ್ದಾರೆ.
2015ರ ನೂಕ್ಲಿಯರ್ ಡೀಲ್ ಹಿಂಪಡೆಯುವಿಕೆಯ ಡೊನಾಲ್ಡ್ ಟ್ರಂಪ್ ನಿರ್ಧಾರ ಮತ್ತು ತೆಹ್ರಾನ್ನೊಂದಿಗೆ ವ್ಯವಹಾರ ವೃದ್ಧಿಸಲು ಹಣಕಾಸು ಸಂಸ್ಥೆಗಳಿಗೆ ದಂಡ ವಿಧಿಸುವಿಕೆ ಚಾಬಹಾರ್ ಅಭಿವೃದ್ಧಿಗೆ ಸವಾಲಾಗಿ ಪರಿಣಿಮಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.