ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಭಾನುವಾರದಿಂದ 7 ದಿನಗಳ ವಿದೇಶ ಪ್ರವಾಸ ಆರಂಭಿಸಿದ್ದಾರೆ. ಯುರೋಪಿಯನ್ ರಾಷ್ಟ್ರಗಳಾದ ಇಟಲಿ, ಫ್ರಾನ್ಸ್, ಲಕ್ಷೆಂಬರ್ಗ್, ಬೆಲ್ಜಿಯಂಗಳಿಗೆ ಅವರು ಭೇಟಿಕೊಡಲಿದ್ದಾರೆ.
ಬ್ರುಸೆಲ್ಸ್ನಲ್ಲಿ ಅವರು ಯುರೋಪಿಯನ್ ಯೂನಿಯನ್ನ ಉನ್ನತ ಅಧಿಕಾರಿಗಳನ್ನು ಭೇಟಿಯಾಗಲಿದ್ದು, ಇ.ಯು ಮತ್ತು ಭಾರತ ನಡುವಣ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ತೊಡಕುಗಳನ್ನು ನಿವಾರಿಸುವ ಸಾಧ್ಯತೆ ಇದೆ.
ಜೂನ್ 17ರಿಂದ 23ರವರೆಗಿನ ಭೇಟಿಯಲ್ಲಿ ಅವರು ಯುರೋಪಿಯನ್ ರಾಜಕೀಯ ನಾಯಕತ್ವದೊಂದಿಗೆ ವಿವಿಧ ಜಾಗತಿಕ, ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ಮೊದಲ ಹಂತವಾಗಿ ಅವರು ಇಟಲಿಯ ಪ್ರವಾಸದಲ್ಲಿದ್ದು, ಅಲ್ಲಿನ ನೂತನ ಪ್ರಧಾನಿ ಗೈಸಪೆ ಕಾಂಟೆ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.