ಮೂಡಬಿದಿರೆ: ಇಲ್ಲಿನ ವಿದ್ಯಾಗಿರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕ್ಯಾಂಪಸ್ನಲ್ಲಿ ಜೂ.20 ಹಾಗೂ 21ರಂದು ’ಆಳ್ವಾಸ್ ಪ್ರಗತಿ-2015’ ವಾರ್ಷಿಕ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿದೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉತ್ತಮ ಉದ್ಯೋಗವಕಾಶಗಳಿಂದ ವಂಚಿತರಾಗಿ ಸೀಮಿತವಾದ ಅವಕಾಶಗಳನ್ನು ಪಡೆಯುವಲ್ಲಿ ಮಾತ್ರ ಸಫಲರಾಗುತ್ತಿದ್ದಾರೆ. ಇದನ್ನು ಗಮನಿಸಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಗ್ರಾಮೀಣ ಉದ್ಯೋಗಾಕಾಂಕ್ಷಿಗಳಿಗೆ ವಿಪುಲವಾದ ಮತ್ತು ಉತ್ತಮ ಕಂಪೆನಿಗಳಲ್ಲಿ ಅವಕಾಶಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಈ ಮೇಳವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಆಳ್ವಾಸ್ ಪ್ರಗತಿಯ ೬ನೆ ಆವೃತ್ತಿಯಲ್ಲಿ ೨೫೦ಕ್ಕೂ ಅಧಿಕ ಕಂಪನಿಗಳು/ಉದ್ದಿಮೆಗಳು ಭಾಗವಹಿಸುವ ನಿರೀಕ್ಷೆ ಇದೆ.
ಪ್ರಮುಖ ಉದ್ದಿಮೆಗಳಾದ, Oracle, EY, IBM, TCS, Amazon, Biocon, Adani group, Flipkart, Tech Mahindra, Godrej, Titan, ITC, Taj Group, ICICI Bank, Wipro, TVS, Allcargo, Standard Chartered Bank, Axis Bank, Kirloskar Electric, Himalaya, Idea ಮುಂತಾದ ಉದ್ದಿಮೆಗಳು ಭಾಗವಹಿಸಲಿವೆ. ಈಗಾಗಲೇ 210ಕ್ಕೂ ಹೆಚ್ಚು ಉದ್ದಿಮೆಗಳು ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆಯು 250ನ್ನು ದಾಟುವ ನಿರೀಕ್ಷೆ ಇದೆ.
ಈ ಉದ್ಯೋಗ ಮೇಳದ ಪ್ರಮುಖ ಉದ್ದೇಶವೆಂದರೆ, ಗ್ರಾಮೀಣ ಪ್ರದೇಶಗಳು ಉದ್ಯೋಗಗಳ ಕುರಿತ ಮಾಹಿತಿ ಮತ್ತು ಅವಕಾಶಗಳ ಕೊರತೆಯನ್ನು ತಿಳಿಸುತ್ತದೆ. ಈ ವೇದಿಕೆಯನ್ನು ಮೂಲಭೂತವಾಗಿ ಇಂತಹ ಉದ್ದೇಶಗಳನ್ನು ಈಡೇರಿಸುವ ಸಲುವಾಗಿ 6 ವರ್ಷಗಳ ಹಿಂದೆ ಸ್ಥಾಪಿಸಲಾಗಿತ್ತು.
ಆಳ್ವಾಸ್ ಪ್ರಗತಿಯು ತನ್ನ ಮೊದಲನೆಯ ಆವೃತ್ತಿಯನ್ನು 38 ಉದ್ದಿಮೆಗಳ ಭಾಗವಹಿಸುವಿಕೆಯ ಮೂಲಕ ಪ್ರಾರಂಭಿಸಿತು. ಕಳೆದ ವರ್ಷ ಆಳ್ವಾಸ್ ಪ್ರಗತಿಯು 216 ಉದ್ದಿಮೆಗಳು ಹಾಗೂ 18,000 ಉದ್ಯೋಗಾಕಾಂಕ್ಷಿಗಳ ಭಾಗವಹಿಸುವಿಕೆಗೆ ಸಾಕ್ಷ್ಯವಾಯಿತು ಹಾಗೂ 3,764 ಅಭ್ಯರ್ಥಿಗಳು ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದರು.
ಪ್ರಸಕ್ತ ವರ್ಷದಲ್ಲಿ ವಿವಿಧ ರೀತಿಯ ಉದ್ದಿಮೆಗಳಳಾದ Manufacturing, IT, ITeS, Telecom, BFSI, Sales & Retail, Pharma, Hospitality, Healthcare ಆಳ್ವಾಸ್ ಪ್ರಗತಿಯನ್ನು ಪ್ರತಿನಿಧಿಸಲಿವೆ.
ಆಳ್ವಾಸ್ ಪ್ರಗತಿ ೨೦೧೫ ಕ್ಕೆ ಆಗಮಿಸಲು ಇಚ್ಚಿಸುವ ಅಭ್ಯರ್ಥಿಗಳು ಈ ಕೆಳಕಾಣಿಸಿದ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕಾಗುತ್ತದೆ.
5 ರಿಂದ ೧೦ ಪಾಸ್ ಪೋರ್ಟ್ ಸೈಜ್ ಭಾವಚಿತ್ರ, ಹಾಗೂ ಸ್ವವಿವರಗಳನ್ನು ಒಳಗೊಂಡ ರೆಸ್ಯೂಮ್, ಎಲ್ಲಾ ಅಂಕಪಟ್ಟಿಗಳ ನಕಲು ಪ್ರತಿಗಳ ಆನ್ ಲೈನ್ ನೊಂದಣಿ ಸಂಖ್ಯೆ/ಐಡಿ, ಭಾಗವಹಿಸುವ ಅಭ್ಯರ್ಥಿಗಳು ವಿದ್ಯಾಗಿರಿಯ ಕ್ಯಾಂಪಸ್ನಲ್ಲಿ ಜೂ. 20 ಹಾಗೂ 21ರಂದು ಸರಿಯಾಗಿ ಬೆಳಗ್ಗೆ 8.30ಕ್ಕೆ ಹಾಜರಾಗಬೇಕಾಗಿ ಕೋರಲಾಗಿದೆ.
ಆನ್ ಲೈನ್ ನೊಂದಣಿ: www.alvaspragati.com, ವಿದ್ಯಾರ್ಥಿಗಳ ನೊಂದಣಿಗಾಗಿ ಅಲ್ಲಿ ಪ್ರತ್ಯೇಕವಾದ ಲಿಂಕ್ನ್ನು ನೀಡಲಾಗಿದೆ. ಇಮೇಲ್ ವಿಳಾಸ (ಮಿಂಚಂಚೆ): alvaspragati10@gmail.com
ಅಭ್ಯರ್ಥಿಗಳು 9611686148/8494934852/9008907716/ 815297816 ಹಾಗೂ 08252-262716 ಸಂಪರ್ಕಿಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.