ಮೆಹ್ಸಾನ: ಮಾತಾಜೀ ಎಂದೇ ಖ್ಯಾತರಾಗಿರುವ ಗುಜರಾತ್ ಮೂಲದ ಯೋಗಿ ಪ್ರಹ್ಲಾದ್ ಜಾನಿ ಕಳೆದ 7 ದಶಕಗಳಿಂದ ಅನ್ನ, ನೀರು ಇಲ್ಲದೆ ಜೀವಿಸುತ್ತಿದ್ದಾರೆ. ಅವರ ಈ ಅದ್ಭುತ ವಿಜ್ಞಾನಿಗಳೂ ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಈಗ ಅವರು ಅಂತಾರಾಷ್ಟ್ರೀಯ ಖ್ಯಾತಿಯನ್ನೂ ಗಳಿಸುತ್ತಿದ್ದಾರೆ.
85 ವರ್ಷದ ಅವರು ಈಗಲೂ ಫಿಟ್ ಆಗಿದ್ದು, ಅನ್ನ ನೀರು ಇಲ್ಲದೆ ಬದುಕುವ ಅವರ ಜೀವನ ದೇಶ-ವಿದೇಶಗಳಿಗೂ ಶಾಕ್ ನೀಡಿದೆ. ವಿಜ್ಞಾನಿಗಳಿಂದ ನಾನಾ ತರನಾದ ವೈದ್ಯಕೀಯ ಪರೀಕ್ಷೆಗಳಿಗೂ ಇವರು ಒಳಪಟ್ಟಿದ್ದಾರೆ. ಖ್ಯಾತ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರೂ ಇವರನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ.
ಇವರ ಹಸಿವೆಯೇ ಇಲ್ಲದ ಗುಟ್ಟನ್ನು ರಟ್ಟು ಮಾಡಲು ಆಶ್ರಮದ ಗಿಡ ಮರಗಳನ್ನು ಕೂಡ ಪರೀಕ್ಷೆಗೊಳಪಡಿಸಲಾಗಿದೆ, ಆದರೆ ಎಲ್ಲವು ವೈಫಲ್ಯ ಕಂಡಿದೆ.
ಡಿಆರ್ಡಿಓ(Defence Research and Development Organisation)ದ ವೆಬ್ಸೈಟ್ನಲ್ಲಿನ ಮಾಹಿತಿಯ ಪ್ರಕಾರ, ಜಾನಿ ಅವರು ಹಸಿವು ಮತ್ತು ಬಾಯಾರಿಕೆಯನ್ನು ನಿರ್ಬಂದಿಸುವ ಕಠಿಣ ಅಭ್ಯಾಸ ಮಾಡಿಕೊಂಡಿದ್ದು, ಅದೇ ಅವರಿಗೆ ಸಹಜ ಅಭ್ಯಾಸವಾಗಿ ಮುಂದುವರೆದಿದೆ. ಇದರಿಂದ ಅವರ ಸೆರೆಮ್ ಲೆಪ್ಟಿನ್, ಗ್ರೆಲಿನ್ ಮೆಟೊಬಾಲಿಕ್ ಹಾರ್ಮೋನ್ ಮಟ್ಟ ಹೊರಬಂದಿದೆ ಎಂದಿದೆ.
ತಮ್ಮ ಆಶ್ರಮಕ್ಕೆ ಕಷ್ಟ ಎಂದು ಬಂದವರಿಗೆ ಒಂದು ರೂಪಾಯಿ ಪಡೆಯದೆ ಉಚಿತ ಸಲಹೆ ಸೂಚನೆಗಳನ್ನು ನೀಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಇವರು ಬಳಿ ಆಗಮಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.