ನವದೆಹಲಿ: ತಾಯಿ ಮತ್ತು ಶಿಶು ಮರಣವನ್ನು ಹೋಗಲಾಡಿಸಲು ಭಾರತ ನಿರಂತರವಾಗಿ ಹೋರಾಡುತ್ತಲೇ ಬರುತ್ತಿದೆ. ಸಂತಸದ ಸುದ್ದಿಯೆಂದರೇ, 2013ರ ಬಳಿಕ ತಾಯಂದಿರ ಮರಣ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ಶೇ.22ರಷ್ಟು ತಾಯಿ ಮರಣ ಪ್ರಮಾಣ ಇಳಿಕೆಯಾಗಿದೆ ಎಂದು ಇತ್ತೀಚಿಗೆ ಬಿಡುಗಡೆಯಾದ ಎಸ್ಆರ್ಎಸ್ ಬುಲೆಟಿನ್(2016) ತಿಳಿಸಿದೆ.
ಪ್ರಸ್ತುತ ಪ್ರತಿ ತಿಂಗಳು ಭಾರತದಲ್ಲಿ ಗರ್ಭಧಾರಣೆಗೆ ಸಂಬಂಧಿಸಿದ ಅಪಾಯಗಳಿಂದ ಮರಣವನ್ನಪ್ಪುವ ತಾಯಂದಿರ ಸಂಖ್ಯೆ 1 ಸಾವಿರದಷ್ಟು ಕಡಿಮೆಯಾಗಿದೆ. 2011-2013ರಲ್ಲಿ 167 ಇದ್ದ ತಾಯಿ ಮರಣ ಅನುಪಾತ 2014-16ನೇ ಸಾಲಿನಲ್ಲಿ 130ಕ್ಕೆ ಇಳಿಕೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿತ್ವದ ನಾಯಕತ್ವ ಮತ್ತು ನಿರಂತರ ಬೆಂಬಲ ಈ ಮಹತ್ವದ ಮೈಲಿಗಲ್ಲನ್ನು ಸಾಧಿಸಲು ಸಹಾಯಕವಾಯಿತು ಎಂದು ಆರೋಗ್ಯ ಸಚಿವ ಜೆಪಿ ನಡ್ಡಾ ಅಭಿಪ್ರಾಯಿಸಿದ್ದಾರೆ. ಈ ಕಾರ್ಯದಲ್ಲಿ ಕೈಜೋಡಿಸಿದ ರಾಜ್ಯಗಳಿಗೆ ಅವರು ಧನ್ಯವಾದ ಸಮರ್ಪಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.