ಕೋಲ್ಕತ್ತಾ: ಬರಹಗಾರ್ಥಿ, ಎಡಿಟರ್ ಮತ್ತು ಜಾಧವ್ಪುರ ಯೂನಿವರ್ಸಿಟಿಯ ಹಳೆ ವಿದ್ಯಾರ್ಥಿನಿಯಾಗಿರುವ ಕೋಲ್ಕತ್ತಾ ಮೂಲದ ಮಿಮಿ ಮಂಡಲ್ ಅವರು ಜಾಗತಿಕ ಸೈನ್ಸ್ ಫಿಕ್ಷನ್ ಅವಾರ್ಡ್ ‘2018 ಹುಗೊ ಅವಾರ್ಡ್’ಗೆ ನಾಮನಿರ್ದೇಶನಗೊಂಡಿದ್ದಾರೆ.
ಸೈನ್ಸ್ ಫಿಕ್ಷನ್ ಬುಕ್-ದಿ ಅಥಾಲಜಿ ’ಲುಮಿನೆಸೆಂಟ್ ಥ್ರೆಡ್ಸ್’ನ್ನು ಕೋ-ಎಡಿಟ್ ಮಾಡಿರುವುದಕ್ಕೆ ಅವರು ಈ ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
ಈ ಹಿಂದೆ ಅರ್ತುರ್ ಸಿ ಕ್ಲಾರ್ಕೆ, ಇಸಾಕ್ ಅಸಿಮೋವ್, ನೀಲ್ ಗೈಮನ್ ಅಂತಹವರು ಈ ಪ್ರತಿಷ್ಠಿತ ಅವಾರ್ಡ್ಗೆ ನಾಮನಿರ್ದೇಶನಗೊಂಡಿದ್ದರು. ಕೋಲ್ಕತ್ತಾ ಮೂಲದ ಯುವತಿಯೊಬ್ಬಳು ಈ ಪ್ರಶಸ್ತಿಗೆ ನಾಮನಿರ್ದೇಶಿತಗೊಳ್ಳುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.