ಬೆಂಗಳೂರು : ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ 1.2 ಕೋಟಿ ಖರ್ಚು ಮಾಡಲು ಮುಂದಾದ ಮಾಸ್ತಿಗುಡಿ ಸಿನಿಮಾದ ನಿರ್ಮಾಪಕ ದೃಶ್ಯ ಚಿತ್ರೀಕರಣಕ್ಕೂ ಮುನ್ನ ಎಚ್ಚರಿಕೆಯ ಕ್ರಮವೆಂಬಂತೆ ನಟರಿಗೆ ನೀಡಬೇಕಾಗಿದ್ದ ಕೇವಲ 500-1000 ಬೆಲೆಬಾಳುವ ಲೈಫ್ ಜಾಕೆಟ್ ನೀಡದಿರುವ ಪರಿಣಾಮ ಕನ್ನಡ ಸಿನಿಮಾರಂಗ ಇಬ್ಬರು ಉತ್ತಮ ನಟರಿಬ್ಬರನ್ನು ಕಳೆದುಕೊಳ್ಳುವಂತಾಗಿದೆ.
ಇದೀಗ ಟಿಕ್ನಾಲಜಿ ಮುಂದುವರೆದಿದ್ದು ಅವರು ಇಂತಹ ಸಾಹಸಕ್ಕೆ ಕೈ ಹಾಕಿದ್ದು ದಡ್ಡತನದ ಪ್ರದರ್ಶನವಾಗಿದೆ. ನಾಯಕನಿಗೆ ಲೈಫ್ ಜಾಕೆಟ್ ನೀಡಿದ್ದ ಸಿನಿಮಾತಂಡ, ಖಳನಟರಿಗೇಕೆ ನೀಡಿರಲಿಲ್ಲ ಎಂಬ ಪ್ರಶ್ನೆ ಜನಸಾಮಾನ್ಯರಿಗೆ ಎದುರಾಗಿದೆ.
ಸೋಮವಾರ ಸಂಜೆ ಬೆಂಗಳೂರಿನ ತಿಪ್ಪೆಗೊಂಡನಹಳ್ಳಿಯಲ್ಲಿ ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ಜಲಾಶಯದಲ್ಲಿ ಚಿತ್ರಿಕರಿಸುತ್ತಿರುವ ಸಂದರ್ಭದಲ್ಲಿ ಈ ಅವಗಡ ಸಂಭವಿಸಿದ್ದು ಇತ್ತೀಚಿಗೆ ತೆರೆ ಮೇಲೆ ಮಿಂಚುತ್ತಿದ್ದ ನಟರಾದ ಅನಿಲ್, ರಾಘವ್ ಉದಯ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಶೂಟಿಂಗ್ ಮುನ್ನ ಜಲಾಶಯದ ಆಳ ಎಷ್ಟಿದೆ ಎಂಬ ಬಗ್ಗೆ ಚಿತ್ರತಂಡ ತಿಳಿಯದೇ ಒಂದು ಟೇಕ್ ನೋಡದೇ ಒಮ್ಮೆಲೇ ನೇರವಾಗಿ ಶೂಟಿಂಗ್ ಮಾಡಲು ಹೋಗಿ ಇಬ್ಬರು ಅಮಾಯಕ ನಟರ ಜೀವ ನೀರ ಪಾಲಾಯಿತು. ಕಾನೂನಿನ ಉಲ್ಲಂಘನೆ ಮಾಡಿ ಇಲ್ಲಿ ಚಿತ್ರೀಕರಣ ಮಾಡಿದ್ದಾರೆ. ಸಾಮಾನ್ಯವಾಗಿ ಕನ್ನಡ ಸಿನಿಮಾರಂಗದಲ್ಲಿ ಶೇ.90 % ಸ್ಟಂಟ್ಗಳ ದೃಶ್ಯವನ್ನು ಲೈವಾಗಿ ಚಿತ್ರಿಕರಿಸುವುದಿಲ್ಲ ಆದರೆ ಸಿನಿಮಾ ರಂಗದಲ್ಲಿ ಹೆಸರು ಮಾಡಬೇಕೆಂದು ಬಯಸಿದ್ದ ಅನಿಲ್, ಉದಯ್ ಈ ರೀತಿಯ ಸಾಹಸಕ್ಕೆ ಮುಂದಾಗಿದ್ದಾರೆ ಎಂದು ಸ್ಯಾಂಡಲ್ವುಡ್ನ ಅನುಭವಿ ನಟ-ನಿದೇರ್ಶಕ ಹೇಳಿದ್ದಾರೆ.
ಈಜು ಬರದವರಿಗೆ ಈ ರೀತಿಯ ದೃಶ್ಯಕ್ಕೆ ಯಾವುದೇ ರಕ್ಷಣಾಕ್ರಮಗಳಿಲ್ಲದೇ ಬಳಸಿಕೊಂಡದ್ದು ಎಷ್ಟು ಸರಿ? ಆ ರೀತಿಯ ದೃಶ್ಯ ಚಿತ್ರೀಕರಣವನ್ನು ಯಾವುದಾದರು ಸ್ವಿಮ್ಮಿಂಗ್ ಫೂಲ್ ಅಥವಾ ರೆಸಾರ್ಟ್ನಲ್ಲಿ ಮಾಡಬಹುದಿತ್ತು ಎಂದು ಕೆಲ ಸ್ಟಂಟ್ಮಾಸ್ಟರ್ಗಳು ಪ್ರಶ್ನಿಸಿದ್ದಾರೆ.
ಈ ರೀತಿ ಘಟನೆ ಸಂಭವಿಸಿದ್ದು ನಿಜಕ್ಕೂ ದುರಂತಕರ ಆದರೆ ಈಗ ಟೆಕ್ನಾಲಜಿ ಮುಂದುವರೆದಿದ್ದು ಅದನ್ನ ಬಳಸಿಕೊಳ್ಳಬಹುದಿತ್ತು ಈ ರೀತಿಯ ರಿಸ್ಕ್ ತೆಗೆದುಕೊಳ್ಳುವ ಅನಿವಾರ್ಯತೆಯಿರಲಿಲ್ಲ, ಇನ್ನು ಮುಂದಾದರೂ ಈ ರೀತಿ ಬೆಂಕಿ, ಗಾಳಿ. ನೀರಿನೊಂದಿಗೆ ಈ ರೀತಿ ರಿಸ್ಕ್ ತೆಗೆದುಕೊಳ್ಳಬೇಡಿ ಎಂದು ಕೃಷಿ ಸಚಿವ, ನಟ ಮತ್ತು ಕನ್ನಡ ಸಿನಿಮಾರಂಗದ ಅಧ್ಯಕ್ಷರಾದ ಅಂಬರೀಶ್ ಕಳವಳ ವ್ಯಕ್ತಪಡಿಸಿದ್ದಾರೆ.