ನವದೆಹಲಿ: ಏಪ್ರಿಲ್ 26 ರಂದು 13 ರಾಜ್ಯಗಳ 89 ಸ್ಥಾನಗಳಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆಯ ಹೈವೋಲ್ಟೇಜ್ ಪ್ರಚಾರಕ್ಕೆ ಬುಧವಾರ ಸಂಜೆ ತೆರೆ ಬಿದ್ದಿದೆ.
ಏಳು ಹಂತಗಳ ಚುನಾವಣೆಯ ಪೈಕಿ, ಕಳೆದ ಶುಕ್ರವಾರ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಸ್ಥಾನಗಳಿಗೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಸುಮಾರು 65.5 ರಷ್ಟು ಮತದಾನವಾಗಿದೆ.
ಕೇರಳದ ಎಲ್ಲಾ 20, ಕರ್ನಾಟಕದ 28 ಸ್ಥಾನಗಳಲ ಪೈಕಿ 14, ರಾಜಸ್ಥಾನದ 13, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ತಲಾ 8, ಮಧ್ಯಪ್ರದೇಶದಲ್ಲಿ 7, ಅಸ್ಸಾಂ ಮತ್ತು ಬಿಹಾರದಲ್ಲಿ ತಲಾ 5, ತಲಾ 3 ಸ್ಥಾನಗಳಿಗೆ, ಛತ್ತೀಸ್ಗಢ ಮತ್ತು ಪಶ್ಚಿಮ ಬಂಗಾಳ, ಮತ್ತು ಮಣಿಪುರ, ತ್ರಿಪುರ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ 1 ಸ್ಥಾನಗಳಿಗೆ ಎರಡನೇ ಹಂತದಲ್ಲಿ ಮತದಾನ ನಿಗದಿಯಾಗಿದೆ..
ಎರಡನೇ ಹಂತದ ಪ್ರಮುಖ ಸ್ಪರ್ಧಿಗಳಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ (ತಿರುವನಂತಪುರ), ಬಿಜೆಪಿಯ ತೇಜಸ್ವಿ ಸೂರ್ಯ (ಕರ್ನಾಟಕ), ಹೇಮಾ ಮಾಲಿನಿ ಮತ್ತು ಅರುಣ್ ಗೋವಿಲ್ (ಇಬ್ಬರೂ ಉತ್ತರ ಪ್ರದೇಶ), ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ (ವಯನಾಡು) ಮತ್ತು ಶಶಿ ತರೂರ್ (ತಿರುವನಂತಪುರ) ಕಣದಲ್ಲಿ ಇದ್ದಾರೆ.
ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ (ಕಾಂಗ್ರೆಸ್), ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (ಜೆಡಿಎಸ್) ಎರಡನೇ ಹಂತದಲ್ಲಿ ಸ್ಪರ್ಧೆ ಎದುರಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.