ನವದೆಹಲಿ: ಮಾಜಿ ಕುಸ್ತಿಪಟು, ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ನರಸಿಂಗ್ ಪಂಚಮ್ ಯಾದವ್ ಅವರು ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಅಥ್ಲೀಟ್ಗಳ ಆಯೋಗದ ಅಧ್ಯಕ್ಷರಾಗಿ ಬುಧವಾರ ಆಯ್ಕೆಯಾಗಿದ್ದಾರೆ. ಕ್ರೀಡೆಯ ವಿಶ್ವ ಆಡಳಿತ ಮಂಡಳಿಯು ಕಡ್ಡಾಯಗೊಳಿಸಿದ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಬಳಿಕ ಅವರ ನೇಮಕ ನಡೆದಿದೆ.
ಏಳು ಸ್ಥಾನಗಳಿಗೆ ಒಟ್ಟು ಎಂಟು ಅಭ್ಯರ್ಥಿಗಳು ಕಣದಲ್ಲಿದ್ದು, ಬ್ಯಾಲೆಟ್ ಪೇಪರ್ನಲ್ಲಿ ನಡೆಸಿದ ಮತದಾನದ ನಂತರ ಏಳು ಸದಸ್ಯರು ಆಯ್ಕೆಯಾದರು. ನಂತರ ನರಸಿಂಗ್ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.
ಕ್ರೀಡಾಪಟುಗಳ ಆಯೋಗದ ಇತರ ಚುನಾಯಿತ ಸದಸ್ಯರು ಸಾಹಿಲ್ (ದೆಹಲಿ), ಸ್ಮಿತಾ ಎಎಸ್ (ಕೇರಳ), ಭಾರತಿ ಭಾಗೇಯ್ (ಯುಪಿ), ಖುಷ್ಬೂ ಎಸ್ ಪವಾರ್ (ಗುಜರಾತ್), ನಿಕ್ಕಿ (ಹರಿಯಾಣ), ಮತ್ತು ಶ್ವೇತಾ ದುಬೆ (ಬಂಗಾಳ).
VIDEO | Here's what #WFI president Sanjay Singh said on former wrestler Narsingh Pancham Yadav being elected chairman of Wrestling Federation of India's Athletes' Commission as mandated by United World Wrestling
"Today, Athlete Commission of India election took place. Eight… pic.twitter.com/oQUhy8F74r
— Press Trust of India (@PTI_News) April 24, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.