News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮಾಜಿ ಕ್ರಿಕೆಟಿಗನಿಗೆ ಮರು ಜೀವನ ನೀಡಿದ ಹರ್ಭಜನ್ ಸಿಂಗ್

ನವದೆಹಲಿ: ಆನ್ ಫೀಲ್ಡ್ ಮಾತ್ರವಲ್ಲ ಆಫ್ ಫೀಲ್ಡ್‌ನಲ್ಲೂ ತಾನು ಚಾಂಪಿಯನ್ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಹರ್ಭಜನ್ ಸಿಂಗ್. ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಮಾಜಿ ಕ್ರಿಕೆಟಿಗನ ನೆರವಿಗೆ ಅವರು ಧಾವಿಸಿದ್ದಾರೆ. ಹರ್ಭಜನ್ ಜೊತೆ ಪಂಜಾಬ್ ಪರ ಅಂಡರ್ 16 ಪಂದ್ಯಗಳನ್ನು ಆಡುತ್ತಿದ್ದ ಹರ್ಮಾನ್...

Read More

ದೇಶದಲ್ಲೇ ಪ್ರಥಮ: ಅಂಡರ್‌ಪಾಸ್ ಹೆದ್ದಾರಿ ಹೊಂದಲಿದೆ ವಾರಣಾಸಿ ಏರ್‌ಪೋರ್ಟ್

ವಾರಣಾಸಿ: ಉತ್ತರಪ್ರದೇಶದ ವಾರಣಾಸಿಯಿಂದ 26 ಕಿಮೀ ದೂರದಲ್ಲಿರುವ ಬಬತ್‌ಪುರದಲ್ಲಿನ ಲಾಲ್ ಬಹುದ್ದೂರ್ ಶಾಸ್ತ್ರೀ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಶೀಘ್ರದಲ್ಲೇ ಅಂಡರ್‌ಪಾಸ್ ರಾಷ್ಟ್ರೀಯ ಹೆದ್ದಾರಿಯನ್ನು ಹೊಂದಿರುವ ದೇಶದ ಮೊತ್ತ ಮೊದಲ ಏರ್‌ಪೋರ್ಟ್ ಎನಿಸಿಕೊಳ್ಳಲಿದೆ. ಅಂಡರ್‌ಪಾಸ್‌ನಲ್ಲಿ ಹೆದ್ದಾರಿ ಇರುವುದರಿಂದ ಏರ್‌ಪೋರ್ಟ್‌ಗೆ ವಿಸ್ತರಣಾ ಯೋಜನೆ ಹಮ್ಮಿಕೊಳ್ಳಲು ಸಹಾಯಕವಾಗುತ್ತದೆ...

Read More

ಸುನಂದಾ ಪುಷ್ಕರ್ ಸಾವು: ತರೂರ್‌ಗೆ ಜುಲೈ 7ಕ್ಕೆ ಹಾಜರಾಗುವಂತೆ ಸಮನ್ಸ್

ನವದೆಹಲಿ: ಸುನಂದಾ ಪುಷ್ಕರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಕಾಂಗ್ರೆಸ್ ಮುಖಂಡ ಹಾಗೂ ಆಕೆಯ ಪತಿ ಶಶಿ ತರೂರ್ ಅವರಿಗೆ ಸಮನ್ಸ್ ಜಾರಿಗೊಳಿಸಿದ್ದು, ಜುಲೈ 7ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ದೆಹಲಿ ಪೊಲೀಸರು ಸಲ್ಲಿಕೆ ಮಾಡಿದ ಚಾರ್ಜ್‌ಶೀಟ್ ಸಂಬಂಧ ಸಮನ್ಸ್...

Read More

ಪೆಟ್ರೋಲ್, ಡೀಸೆಲ್ ದರದಲ್ಲಿ 8ನೇ ದಿನವೂ ಕಡಿತ

ನವದೆಹಲಿ: ಪೆಟ್ರೋಲ್ ಮತ್ತು ಡಿಸೇಲ್ ದರ ಲೀಟರ್‌ಗೆ ಪ್ರಸ್ತುತ 8-12 ಪೈಸೆ ರೇಂಜ್‌ನಲ್ಲಿ ಕಡಿತಗೊಂಡಿದೆ. ಸತತ 8ನೇ ದಿನವೂ ದರದಲ್ಲಿ ಕಡಿತಗೊಂಡಿರುವುದು ಗ್ರಾಹಕರಲ್ಲಿ ತುಸು ನಿರಾಳತೆಯನ್ನು ತಂದಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಕುಸಿತ ಕಾಣಬಹುದು ಎಂಬ ನಿರೀಕ್ಷೆಯನ್ನು ಮೂಡಿಸಿದೆ. ಪೆಟ್ರೋಲ್, ಡೀಸೆಲ್...

Read More

‘ವಿದ್ಯುತ್ ಬಿಲ್ ಮನ್ನಾ ಯೋಜನೆ’ ಪ್ರಕಟಿಸಿದ ಮಧ್ಯಪ್ರದೇಶ

ಭೋಪಾಲ್: ಮಧ್ಯಪ್ರದೇಶ ಸರ್ಕಾರ ಕಾರ್ಮಿಕರಿಗಾಗಿ ಮತ್ತು ಬಡವರಿಗಾಗಿ ವಿದ್ಯುತ್ ಬಿಲ್ ಮನ್ನಾ ಯೋಜನೆಯನ್ನು ಪ್ರಕಟಿಸಿದೆ. ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ನೇತೃತ್ವದ ಸಂಪುಟ ಸಮಿತಿ ಸಭೆಯಲ್ಲಿ ‘ಬಿಜಿಲಿ ಬಿಲ್ ಮಾಫಿ ಯೋಜನಾ 2018’ಗೆ ಅನುಮೋದನೆಯನ್ನು ನೀಡಲಾಗಿದ್ದು, ಇದರಿಂದ ಸುಮಾರು 77 ಲಕ್ಷ...

Read More

ಧನಾತ್ಮಕತೆ ತರುವ 3ಡಿ ಯೋಗ ವೀಡಿಯೋ ಶೇರ್ ಮಾಡಿದ ಮೋದಿ

ನವದೆಹಲಿ: ಜೂನ್ 21ರಂದು ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ವಿಶ್ವ ಸಜ್ಜಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟರ್‌ನಲ್ಲಿ 3ಡಿ ಯೋಗ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಶಾಂತಿ ಮತ್ತು ಧನಾತ್ಮಕತೆಯನ್ನು ತರುವ ‘ನಾಡಿ ಶೋಧನಾ ಪ್ರಾಣಾಯಾಮ’ (ಅನುಲೋಮ ವಿಲೋಮ)ದ ವೀಡಿಯೋವನ್ನು...

Read More

ಕಿಶನ್‌ಗಂಗಾ ಡ್ಯಾಂ: ಭಾರತದ ಬೇಡಿಕೆ ಒಪ್ಪಿಕೊಳ್ಳುವಂತೆ ಪಾಕ್‌ಗೆ ವಿಶ್ವಬ್ಯಾಂಕ್ ಸಲಹೆ

ನವದೆಹಲಿ: ಕಿಶನ್‌ಗಂಗಾ ಡ್ಯಾಂಗೆ ಸಂಬಂಧಿಸಿದ ವಿವಾದವನ್ನು ಬಗೆಹರಿಸುವ ಸಲುವಾಗಿ ಭಾರತ ಮುಂದಿಟ್ಟಿರುವ ಬೇಡಿಕೆಯನ್ನು ಒಪ್ಪಿಕೊಳ್ಳುವಂತೆ ವಿಶ್ವಬ್ಯಾಂಕ್ ಪಾಕಿಸ್ಥಾನಕ್ಕೆ ಸಲಹೆ ನೀಡಿದೆ. ವಿವಾದಕ್ಕೆ ಸಂಬಂಧಿಸಿದಂತೆ ತಟಸ್ಥ ಧೋರಣೆ ತಳೆದಿರುವ ತಜ್ಞರನ್ನು ನೇಮಕಗೊಳಿಸುವ ಬಗ್ಗೆ ಭಾರತ ಪಾಕಿಸ್ಥಾನಕ್ಕೆ ಬೇಡಿಕೆ ಇಟ್ಟಿತ್ತು. ಈ ಬೇಡಿಕೆಯನ್ನು ಒಪ್ಪಿಕೊಳ್ಳುವಂತೆ...

Read More

ಮುಘಲ್‌ಸರಾಯ್ ಜಂಕ್ಷನ್‌ ಈಗ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್

ನವದೆಹಲಿ: ಐತಿಹಾಸಿಕ ಮುಘಲ್‌ಸರಾಯ್ ಜಂಕ್ಷನ್‌ಗೆ ಉತ್ತರಪ್ರದೇಶ ಸರ್ಕಾರ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ಎಂದು ಮರು ನಾಮಕರಣ ಮಾಡಿದೆ. ಈ ಬಗ್ಗೆ ಜೂನ್ 4, 2018ಕ್ಕೆ ಅನ್ವಯವಾಗುವಂತೆ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದೆ. ಮುಘಲ್‌ಸರಾಯ್ ಜಂಕ್ಷನ್ ರೈಲ್ವೇ ಸ್ಟೇಶನ್‌ಗೆ ಪಂಡಿತ್ ದೀನ್...

Read More

ಜ.ಕಾಶ್ಮೀರದ ಮಚ್ಚಿಲ್ ಸೆಕ್ಟರ್‌ನಲ್ಲಿ 3 ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಕಾಶ್ಮೀರದ ಮಚ್ಚಿಲ್ ಸೆಕ್ಟರ್‌ನ ವಾಸ್ತವ ಗಡಿ ರೇಖೆಯ ಸಮೀಪ ಭಾರತೀಯ ಸೇನಾಪಡೆ ಅಕ್ರಮ ಒಳನುಸುಳುವಿಕೆಯ ಪ್ರಯತ್ನವನ್ನು ವಿಫಲಗೊಳಿಸಿದ್ದು, 3 ಉಗ್ರರನ್ನು ಹತ್ಯೆ ಮಾಡಿದೆ. ಮಚ್ಚಿಲ್ ಸೆಕ್ಟರ್‌ನಲ್ಲಿ ಉಗ್ರರ ಸಂಶಯಾಸ್ಪದ ಚಲನವಲನದ ಬಗ್ಗೆ ಪತ್ತೆ ಮಾಡಿದ ಸೇನಾ ಪಡೆ, ಕಾರ್ಯಾಚರಣೆ ನಡೆಸಿ...

Read More

ಇಫ್ತಾರ್ ಕೂಟ ಆಯೋಜಿಸಿದ ಅಯೋಧ್ಯಾದ ಸರಯು ಕುಂಜ್ ದೇಗುಲ

ಅಯೋಧ್ಯಾ: ಕೋಮು ಸೌಹಾರ್ದತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ಅಯೋಧ್ಯಾದಲ್ಲಿನ ಸರಯು ಕುಂಜ್ ದೇಗುಲ ಮಂಡಳಿಯು ಮುಸ್ಲಿಂ ಬಾಂಧವರಿಗಾಗಿ ಇಫ್ತಾರ್ ಕೂಟವನ್ನು ಆಯೋಜನೆಗೊಳಿಸಿದೆ. 500 ವರ್ಷ ಹಳೆಯ ಈ ದೇಗುಲ, ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಜಾಗದ ಪಕ್ಕದಲ್ಲೇ ಇದೆ. ಸಾಮಾನ್ಯ ಜನರು ಈ ಇಫ್ತಾರ್ ಕೂಟದಲ್ಲಿ...

Read More

Recent News

Back To Top