ನವದೆಹಲಿ: ಮಹಿಳೆಯರಿಗಾಗಿ ಮೀಸಲಾಗಿರುವ ಕೋಚುಗಳನ್ನು ರೈಲಿನ ಕೊನೆಯ ಬದಲು ಮಧ್ಯದಲ್ಲಿ ಇಡಲು ನಿರ್ಧರಿಸಲಾಗಿದೆ, ಮಾತ್ರವಲ್ಲ ಇದರ ಬಣ್ಣ ಗುಲಾಬಿಯಾಗಿರಲಿದೆ. ಕೋಚುಗಳನ್ನು ಸುಲಭವಾಗಿ ಪತ್ತೆ ಮಾಡುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಬ್ಅರ್ಬನ್ನ ದೂರ ಪ್ರಯಾಣಿಸುವ ರೈಲುಗಳಲ್ಲಿ ಇದು ಲಭ್ಯವಿರಲಿದೆ. 2018ನ್ನು ಮಹಿಳಾ ಸುರಕ್ಷತೆಯ ವರ್ಷವಾಗಿ ಆಚರಿಸಲು ರೈಲ್ವೇ ನಿರ್ಧಾರ ಮಾಡಿದ್ದು, ಈ ಹಿನ್ನಲೆಯಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ.
ಮಹಿಳಾ ಮೀಸಲು ಕೋಚುಗಳಲ್ಲಿ ಸಿಸಿಟಿವಿ ಕ್ಯಾಮರಾ, ಹೆಚ್ಚುವರಿ ಭದ್ರತಾ ಕ್ರಮಗಳು ಇರಲಿವೆ. ಮಾತ್ರವಲ್ಲ ಕಿಟಕಿಗಳನ್ನು ವೈಯರ್ ಮೆಶಸ್ಗಳಿಂದ ಕವರ್ ಮಾಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.