News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 28th November 2026

×
Home About Us Advertise With s Contact Us

ಮೇ 26ರಿಂದ ಎನ್‌ಡಿಎ 3 ವರ್ಷ ಪೂರೈಸಿದ ಸಂಭ್ರಮಾಚರಣೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಆಡಳಿತಕ್ಕೆ ಬಂದು 3 ವರ್ಷಗಳನ್ನು ಪೂರೈಸುತ್ತಿದೆ. ಈ ಹಿನ್ನಲೆಯಲ್ಲಿ ಮೇ 26ರಿಂದ ಜೂನ್ 15ರವರೆಗೆ ಸಂಭ್ರಮಾಚರಣೆಯನ್ನು ನಡೆಸಲು ನಿರ್ಧಾರಿಸಲಾಗಿದೆ. ಮೇ 26ರಂದು ಗುವಾಹಟಿಯಲ್ಲಿ ಪ್ರಧಾನಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡುವುದರ ಮೂಲಕ ಸಂಭ್ರಮಾಚರಣೆ...

Read More

ಲಾಲೂ ಬೇನಾಮಿ ಆಸ್ತಿ ಆರೋಪ: ಆದಾಯ ತೆರಿಗೆ ಇಲಾಖೆ ದಾಳಿ

ನವದೆಹಲಿ: ಸಾವಿರ ಕೋಟಿಯ ಬೇನಾಮಿ ಆಸ್ತಿ ವ್ಯವಹಾರದಲ್ಲಿ ಕೈವಾಡವಿರುವ ಆರೋಪದ ಹಿನ್ನಲೆಯಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಸಂಬಂಧಪಟ್ಟ ದೆಹಲಿ ಮತ್ತು ಹರಿಯಾಣಗಳಲ್ಲಿನ ಹಲವಾರು ಸ್ಥಳಗಳಿಗೆ ಮಂಗಳವಾರ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿದೆ. ಮುಂಜಾನೆ 3 ಗಂಟೆಗೆ...

Read More

ರ‍್ಯಾನ್‌ಸಮ್‌ವೇರ್ ಜಾಗತಿಕ ಸೈಬರ್ ಅಟ್ಯಾಕ್ ತಪ್ಪಿಸಿದ ಬ್ರಿಟನ್ ಕಂಪ್ಯೂಟರ್ ತಜ್ಞ

ವಾನ್ನಾಕ್ರೈ ರ‍್ಯಾನ್‌ಸಮ್‌ವೇರ್ ಸೈಬರ್ ಅಟ್ಯಾಕ್ ಜಾಗತಿಕವಾಗಿ ದೊಡ್ಡ ಭೀತಿಯನ್ನು ಸೃಷ್ಟಿಸಿದೆ. ಆದರೆ ಈ ಸೈಬರ್ ದಾಳಿಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ ಕೀರ್ತಿ ಬ್ರಿಟನ್ ಯುವ ಕಂಪ್ಯೂಟ್ ತಜ್ಞ ಮರ್ಕಸ್ ಹುಚಿನ್ಸ್‌ಗೆ ಸಲ್ಲುತ್ತದೆ. ಸದ್ಯಕ್ಕೆ ಈತ ಒಬ್ಬ ಹೀರೋನಂತೆ ಕಾಣುತ್ತಿದ್ದಾನೆ. ಆದರೆ...

Read More

ಎತ್ತುಗಳಿಂದ ವಿದ್ಯುತ್ ಉತ್ಪಾದಿಸಲಿದೆ ಪತಂಜಲಿ

ನವದೆಹಲಿ: ಹಲವಾರು ಸಂಶೋಧನೆಗಳಲ್ಲಿ ತೊಡಗಿರುವ ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಸಂಸ್ಥೆ ಶೀಘ್ರದಲ್ಲೇ ಎತ್ತುಗಳನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಕಾರ್ಯ ಮಾಡಲಿದೆ. ಕಳೆದ ಒಂದುವರೆ ವರ್ಷದಿಂದ ಎತ್ತುಗಳನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಬಗ್ಗೆ ಸಂಶೋಧನೆಗಳು ನಡೆಯುತ್ತಿದ್ದು, ಇದೀಗ ಈ...

Read More

ಎದೆಹಾಲು ದಾನ ಮಾಡುವ ಚೆನ್ನೈನಲ್ಲಿನ ತಾಯಂದಿರು

ತಾಯಿಯ ಹಾಲನ್ನು ಅಮೃತಕ್ಕೆ ಹೋಲಿಸಲಾಗುತ್ತದೆ. ಮಗುವಿನ ಸಂಪೂರ್ಣ ವಿಕಾಸಕ್ಕೆ ಎದೆಹಾಲು ಅತ್ಯವಶ್ಯಕ. ಆದರೆ ಅದೆಷ್ಟೋ ನವಜಾತ ಶಿಶುಗಳು ತಾಯಿಯ ಎದೆಹಾಲಿನಿಂದ ವಂಚಿತವಾಗಿರುತ್ತದೆ. ಪ್ರಸವದ ವೇಳೆ ಸಂಭವಿಸುವ ತಾಯಿಯ ಮರಣವೇ ಹೆಚ್ಚಿನ ಮಗು ಎದೆಹಾಲಿನಿಂದ ವಂಚಿತವಾಗಲು ಕಾರಣವಾಗುತ್ತದೆ. ತಾಯಿ ತೊರೆದು ಹೋದಾಗ ಮತ್ತು...

Read More

ಪರಿಸರಸ್ನೇಹಿ ಪ್ರವಾಸೋದ್ಯಮ ಉತ್ತೇಜಿಸುತ್ತಿರುವ ಮಣಿಪುರದ ಯುವಕರ ತಂಡ

ಉಕ್ರುಲ್: ಈಶಾನ್ಯ ಭಾಗ ತನ್ನ ಪ್ರಕೃತಿ ಸೌಂದರ್ಯದಿಂದಾಗಿ ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತಿದೆ. ಅಲ್ಲಿನ ಗಿರಿ ಶಿಖರ, ವೃಕ್ಷ ಸೌಂದರ್ಯ ತಂಪಾದ ಪ್ರದೇಶವನ್ನು ಆಸ್ವಾದಿಸಬೇಕೆಂಬ ಆಶಯ ಎಲ್ಲರ ಮನದಲ್ಲೂ ಇರುತ್ತದೆ. ಆದರೆ ಅಲ್ಲಿನ ಯುವ ಸಮುದಾಯ ಮಾತ್ರ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಉದ್ಯೋಗವನ್ನು ಅರಸುತ್ತಾ...

Read More

188 ರನ್ ಬಾರಿಸಿದ 2ನೇ ಮಹಿಳಾ ಆಟಗಾರ್ತಿಯಾಗಿ ದೀಪ್ತಿ ಶರ್ಮಾ ಸಾಧನೆ

ಸೌತ್ ಆಫ್ರಿಕಾ: ಇಲ್ಲಿ ನಡೆಯುತ್ತಿರುವ ಮಹಿಳೆಯರ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತೀಯ ಆಟಗಾರ್ತಿ 188 ರನ್‌ಗಳನ್ನು ದಾಖಲಿಸಿದ್ದು, ಈ ಮೂಲಕ ಈ ಸಾಧನೆ ಮಾಡಿದ ಎರಡನೇ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೋಮವಾರ ಅಂತ್ಯಗೊಂಡ ತ್ರಿಕೋಣ ಸರಣಿಯಲ್ಲಿ ಭಾರತ 249ರನ್‌ಗಳನ್ನು...

Read More

ಪಾಟ್ನಾದಲ್ಲಿ ಸ್ಥಾಪನೆಯಾಗಲಿದೆ ರೋಟಿ ಬ್ಯಾಂಕ್

ಪಾಟ್ನಾ: ಹಸಿದವರ ಹೊಟ್ಟೆಯನ್ನು ತಣಿಸುವುದಕ್ಕಾಗಿ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ರೋಟಿ ಬ್ಯಾಂಕ್‌ವೊಂದು ಅಸ್ತಿತ್ವಕ್ಕೆ ಬರಲು ಸಜ್ಜಾಗಿದೆ. ಜೂನ್ 15ರಂದು ಇದು ಆರಂಭಗೊಳ್ಳಲಿದ್ದು, ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಎಎನ್ ಸಿನ್ಹಾ ಇನ್‌ಸ್ಟಿಟ್ಯೂಟ್ ಆಫ್ ಸೋಶಲ್ ಸ್ಟಡೀಸ್‌ನ ಸಂಶೋಧಕರಾಗಿರುವ ರಿಷಿಕೇಶ್ ನಾರಾಯಣ್...

Read More

ಬಡ ತಾಯಂದಿರಿಗಾಗಿ ಫೌಂಡೇಶನ್ ಆರಂಭಿಸಿದ ಸುರೇಶ್ ರೈನಾ

ನವದೆಹಲಿ: ಬಡತನದಲ್ಲಿರುವ, ಮಕ್ಕಳನ್ನು ಪೋಷಿಸಲು ಕಷ್ಟ ಪಡುತ್ತಿರುವ ತಾಯಂದಿರಿಗಾಗಿ ಕ್ರಿಕೆಟಿಗೆ ಸುರೇಶ್ ರೈನಾ ಅವರು ಗ್ರಾಶಿಯ ರೈನಾ ಫೌಂಡೇಶನ್‌ ಆರಂಭಿಸಿದ್ದಾರೆ. ರೈನಾ ಮತ್ತು ಅವರ ಪತ್ನಿ ಪ್ರಿಯಾಂಕ ಅವರು ತಮ್ಮ ಮಗಳು ಗ್ರಾಶಿಯ ರೈನಾಳ ಹುಟ್ಟಹಬ್ಬದಂದು ಈ ಬಗ್ಗೆ ಘೋಷಣೆ ಮಾಡಿದ್ದರು. ’ಇದು...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ಕರ್ಪೂರ್ ಚಂದ್ರ ಕುಲಿಶ್

ಕರ್ಪೂರ್ ಚಂದ್ರ ಕುಲಿಶ್ ಒರ್ವ ಚಾಣಾಕ್ಷ ಪತ್ರಕರ್ತ, ವೇದ ಪಂಡಿತ, ಚಿಂತಕ, ತತ್ವಜ್ಞಾನಿ ಮತ್ತು ಕವಿ. ರಾಜಸ್ಥಾನ ಪತ್ರಿಕೆಯನ್ನು ಆರಂಭಿಸಿ ಅದನ್ನು ಯಶಸ್ಸಿನ ತುತ್ತ ತುದಿಗೆ ಕೊಂಡುಹೋದ ಕೀರ್ತಿ ಇವರಿಗೆ ಸಲ್ಲುತ್ತದೆ. ಸಣ್ಣ ಪತ್ರಿಕೆಯನ್ನು ರಾಜಸ್ಥಾನದ ಅತೀ ಪ್ರಮುಖ ದಿನಪತ್ರಿಕೆಯನ್ನಾಗಿ ಪರಿವರ್ತಿಸಿದ...

Read More

Recent News

Back To Top