ಉಕ್ರುಲ್: ಈಶಾನ್ಯ ಭಾಗ ತನ್ನ ಪ್ರಕೃತಿ ಸೌಂದರ್ಯದಿಂದಾಗಿ ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತಿದೆ. ಅಲ್ಲಿನ ಗಿರಿ ಶಿಖರ, ವೃಕ್ಷ ಸೌಂದರ್ಯ ತಂಪಾದ ಪ್ರದೇಶವನ್ನು ಆಸ್ವಾದಿಸಬೇಕೆಂಬ ಆಶಯ ಎಲ್ಲರ ಮನದಲ್ಲೂ ಇರುತ್ತದೆ. ಆದರೆ ಅಲ್ಲಿನ ಯುವ ಸಮುದಾಯ ಮಾತ್ರ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಉದ್ಯೋಗವನ್ನು ಅರಸುತ್ತಾ ವಲಸೆ ಹೋಗುತ್ತಿದೆ. ಬೇರೆ ಬೇರೆ ನಗರಗಳಿಗೆ ಬಂದು ಇಲ್ಲಿನ ಜನ ಸೆಟ್ಲ್ ಆಗುತ್ತಿದ್ದಾರೆ.
ಆದರೆ ನಗರಗಳಲ್ಲಿ ಉತ್ತಮ ಉದ್ಯೋಗದಲ್ಲಿದ್ದ ಮಣಿಪುರದ 9 ಮಂದಿ ಉತ್ಸಾಹಿ ಯುವಕರ ತಂಡವೊಂದು ಮತ್ತೆ ತಮ್ಮೂರಿಗೆ ತೆರಳಿ ಅಲ್ಲಿನ ಸುಂದರ ಹಚ್ಚ ಹಸಿರಾದ ಪ್ರಕೃತಿಯಲ್ಲೇ ಬದುಕು ಕಟ್ಟಿಕೊಳ್ಳುವ ದಾರಿಯನ್ನು ಹುಡುಕಿದೆ.
ಈ ಯುವಕರ ತಂಡ 2016ರಲ್ಲಿ ಚಿಕೋ ಅಡ್ವೆಂಚರ್ಸ್ ಎಂಬ ಉದ್ಯಮವನ್ನು ಆರಂಭಿಸಿದೆ. ತಮ್ಮೂರಿನ ಪ್ರವಾಸೊದ್ಯಮವನ್ನು ಪ್ರಚಾರ ಪಡಿಸುವುದು, ಅದಕ್ಕೆ ಉತ್ತೇಜನ ನೀಡುವುದೇ ಇವರ ಉದ್ಯಮದ ಪ್ರಮುಖ ಆಶಯ. ಪ್ರಕೃತಿಯಿಂದ ಪಡೆದು ಪ್ರಕೃತಿಗೆ ನೀಡುವುದು ಎಂಬುದು ಇವರ ಧ್ಯೇಯ.
ಕ್ಯಾಂಪ್, ಟ್ರೆಕ್ಕಿಂಗ್, ಸೈಕಲ್ ರ್ಯಾಲಿ, ಮೌಂಟೆನ್ ಬೈಕಿಂಗ್, ಸನ್ ರೈಸ್ ವಾಚ್ ಮುಂತಾದುವುಗಳನ್ನು ಈ ತಂಡ ತನ್ನ ಸಂಸ್ಥೆಯ ಮೂಲಕ ಆಯೋಜನೆ ಮಾಡುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಟೆಂಟ್, ಸ್ಲೀಪಿಂಗ್ ಬ್ಯಾಗ್, ಮೌಂಟೆನ್ ಬ್ಯಾಗ್ಗಳನ್ನು ಕಡಿಮೆ ದರಕ್ಕೆ ಬಾಡಿಗೆ ಕೊಡುವ ಮೂಲಕ ಇವರು ಹಣ ಸಂಪಾದನೆ ಮಾಡುತ್ತಾರೆ.
ಉಕ್ರುಲ್ ಜಿಲ್ಲೆಯಲ್ಲಿ ಮೇ 16ರಿಂದ ಮಣಿಪುರದ ಅತೀದೊಡ್ಡ ಹಬ್ಬ ಶಿರೂಯಿ ಲಿಲ್ ಫೆಸ್ಟಿವಲ್ ನಡೆಯಲಿದ್ದು, ಈ ವೇಳೆ ಅಡ್ವೆಂಚರ್ಸ್ ಕ್ಯಾಂಪ್ಗಳನ್ನು ನಡೆಸಲು ಇವರು ತಯಾರಿ ನಡೆಸಿದ್ದಾರೆ.
ಚಿಕೋ ಅಡ್ವೆಂಚರ್ಸ್ ಮೂಲಕ ಈ ತಂಡ ಹಣ ಸಂಪಾದನೆ ಮಾತ್ರವಲ್ಲ, ತನ್ನ ರಾಜ್ಯದ ಪ್ರವಾಸೋದ್ಯಮವನ್ನೂ ಬೆಳೆಸುತ್ತಿದೆ. ಎಕೋ ಫ್ರೆಂಡ್ಲಿ ಟೂರಿಂಸಗೆ ಹೆಚ್ಚಿನ ಒತ್ತನ್ನು ಇವರು ನೀಡುತ್ತಿರುವುದು ವಿಶೇಷ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.