ನವದೆಹಲಿ: ಭಾರತದ ಒಟ್ಟು 11 ಮಂದಿ ಸಿರಿಯಾ ಮತ್ತು ಇರಾಕ್ನಲ್ಲಿ ಪ್ರತ್ಯೇಕ ಇಸ್ಲಾಮ್ ಸಾಮ್ರಾಜ್ಯ ಸ್ಥಾಪನೆಗಾಗಿ ಹೋರಾಡುತ್ತಿರುವ ಭಯಾನಕ ಇಸಿಸ್ ಉಗ್ರ ಸಂಘಟನೆಯನ್ನು ಸೇರಿದ್ದಾರೆ ಎಂದು ಗುಪ್ತಚರ ಇಲಾಖೆ ಸಂಗ್ರಹಿಸಿರುವ ಗುಪ್ತ ವರದಿಯಿಂದ ತಿಳಿದು ಬಂದಿದೆ.
ಈ 11 ಮಂದಿಯಲ್ಲಿ ಆರು ಮಂದಿ ಗಲ್ಫ್ ದೇಶದಲ್ಲಿದ್ದು, ಅಲ್ಲಿಂದಲೇ ಇರಾಕ್ಗೆ ತೆರಳಿ ಇಸಿಸ್ ಸೇರ್ಪಡೆಗೊಂಡವರು. ಉಳಿದವರು ಭಾರತದಲ್ಲೇ ವಾಸವಿದ್ದವರು ಎಂದು ತಿಳಿದು ಬಂದಿದೆ.
ಇದುವರೆಗೆ ಗುಪ್ತಚರ ಇಲಾಖೆ ಮುಂಬಯಿನ ಕಲ್ಯಾಣ್ನ ನಾಲ್ವರು ಯುವಕರು ಇಸಿಸ್ ಸೇರ್ಪಡೆಗೊಂಡಿದ್ದರು, ಇನ್ನೂ ಐವರು ಇಸಿಸ್ಗಾಗಿ ಹೋರಾಡುತ್ತಿದ್ದಾರೆ ಎನ್ನಲಾಗಿದೆ. ಅದರಲ್ಲಿ ಕೆಲವರು ಇಸಿಸ್ಗಾಗಿ ಹೋರಾಡಿ ಈಗಾಗಲೇ ಪ್ರಾಣ ತೆತ್ತಿದ್ದಾರೆ, ಒಬ್ಬಾತ ಇಸಿಸ್ ಸಂಘಟನೆ ಸೇರಲು ಹೋಗಿ ಮತ್ತೆ ಭಾರತಕ್ಕೆ ವಾಪಾಸ್ ಬಂದಿದ್ದ.
ಆದರೆ ಇಸಿಸ್ ಸೇರಿದ ಇತತರ ಬಗ್ಗೆ ಸರ್ಕಾರಕ್ಕೆ ಹೆಚ್ಚಿನ ಮಾಹಿತಿ ಇಲ್ಲ ಎನ್ನಲಾಗುತ್ತಿದೆ. ಉಗ್ರ ಸಂಘಟನೆಯತ್ತ ಆಕರ್ಷಿತರಾಗುವ ಯುವಕರ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ನಿಗಾ ವಹಿಸುವುದು ಒಳಿತು ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.