ಭಾರತಕ್ಕೆ ಆಗಮಿಸಿದ್ದ ವೇಳೆ ಚಹಾ ಪ್ರೀತಿಯನ್ನು ಬೆಳೆಸಿಕೊಂಡಿದ್ದ ಅಮೆರಿಕಾದ ಮಹಿಳೆಯೊಬ್ಬಳು ಇದೀಗ ಅದೇ ಚಹಾ ವ್ಯಾಪಾರದಲ್ಲಿ ಕೋಟಿಗಟ್ಟಲೆ ಹಣವನ್ನು ಸಂಪಾದನೆ ಮಾಡುತ್ತಿದ್ದಾಳೆ. ಆಕೆಯೇ ಬ್ರೂಕ್ ಎಡ್ಡಿ, ಚಹಾದ ’ಭಕ್ತಿ’ ಎಂಬ ದೊಡ್ಡ ಕಂಪನಿಯನ್ನೇ ಈಕೆ ನಡೆಸುತ್ತಿದ್ದಾಳೆ.
2002ರಲ್ಲಿ ಭಾರತಕ್ಕೆ ಆಗಮಿಸಿದ್ದ ಎಡ್ಡಿ ಇಲ್ಲಿನ ಚಹಾದ ಸವಿಗೆ ಮಾರು ಹೋಗಿದ್ದಳು.2006ರಲ್ಲಿ ವಾಪಾಸ್ ಅಮೆರಿಕಾಗೆ ಹೋದಾಗ ಆಕೆ ಭಾರತದ ಚಹಾ ಸವಿಯನ್ನು ಸಾಕಷ್ಟು ಮಿಸ್ ಮಾಡಿಕೊಂಡಿದ್ದಳು, ಆ ದೇಶದ ಯಾವುದೇ ಚಹಾ ಇಲ್ಲಿನ ಸ್ವಾದವನ್ನು ಆಕೆಗೆ ನೀಡಿರಲಿಲ್ಲ. ಕೊನೆಗೆ ಆಕೆ ತನ್ನದೇ ಆದ ಭಾರತೀಯ ಸ್ವಾದವುಳ್ಳ ಚಹಾ ಸಂಸ್ಥೆಯನ್ನು ಸ್ಥಾಪಿಸಿದಳು. ಅದರ ಹೆಸರೇ ಭಕ್ತಿ. ಭಾರತಕ್ಕೆ ಮತ್ತೆ ಆಗಮಿಸಿ ತಿಳಿದುಕೊಂಡಳು. ಬಳಿಕ ತನ್ನ ಕಾರಿನ ಹಿಂಬಂದಿಯಲ್ಲಿ ಭಾರತೀಯ ಚಹಾದ ಮಿಶ್ರಣವುಳ್ಳ ಮಸೋನ್ ಜಾರ್ಗಳನ್ನು ಮಾರಲಾರಂಭಿಸಿದಳು. ದೊಡ್ಡ ಅಭಿಮಾನಿ ಬಳಗವೇ ಇದರಿಂದ ಆಕೆಗೆ ಹುಟ್ಟಿಕೊಂಡಿತು.
ಒಂದು ವರ್ಷಗಳ ತರುವಾಯ ಭಕ್ತಿ ಚಾಯ್ ತನ್ನ ವೆಬ್ಸೈಟ್ನ್ನು ಆರಂಭಿಸಿತು, ನೋಡ ನೋಡುತ್ತಿದ್ದಂತೆ ಬೃಹದಾಕಾರದಲ್ಲಿ ಈಕೆಯ ವ್ಯವಹಾರ ಕುದುರಿತು. ಈಗ ಈಕೆ ಹಲವಾರು ಮಿಲಿಯನ್ಗಟ್ಟಲೆ ವಹಿವಾಟು ನಡೆಸುತ್ತಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.