ತನ್ನ ಮೇಲೆ ಹೇರಲ್ಪಟ್ಟ ಎಲ್ಲಾ ಕಟ್ಟುಪಾಡುಗಳನ್ನು ಮೀರಿ ಇಂದಿನ ಮಹಿಳೆ ತನಗೆ ಅಸಾಧ್ಯವೆನಿಸಿದ್ದನ್ನು ಸಾಧ್ಯವನ್ನಾಗಿಸುತ್ತಿದ್ದಾಳೆ. ಒಂದರ ಮೇಲೊಂದರಂತೆ ಸಾಧನೆಗಳನ್ನು ಮಾಡುತ್ತಿದ್ದಾಳೆ. ಈ ಮೂಲಕ ಹೆಣ್ಣಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ.
ಅಮೃತ ಕಾಶೀನಾಥ್ ಮತ್ತು ಶುಭ್ರ ಆಚಾರ್ಯ ಎಂಬ ಈ ಇಬ್ಬರು ಯುವತಿಯರು ಕೂಡ ಅಸಾಧಾರಣ ಸಾಧನೆಯನ್ನು ಮಾಡಿದ್ದಾರೆ. ತಮ್ಮ ಮೋಟಾರ್ಸೈಕಲ್ನಲ್ಲಿ ಕನ್ಯಾಕುಮಾರಿಯಿಂದ ಲೇಹ್ಗೆ ಕೇವಲ 5 ದಿನಗಳಲ್ಲಿ ಪ್ರಯಾಣಿಸಿದ್ದಾರೆ.
ಪ್ರಯಾಣದುದ್ದಕ್ಕೂ ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದಾರೆ. ಅಲ್ಲಿನ ಮಹತ್ವಗಳ ಬಗ್ಗೆ ಅರಿತಿದ್ದಾರೆ. 129 ಗಂಟೆಗಳ ಪ್ರಯಾಣ ನಡೆಸಿದ ಇವರು ಪ್ರಯಾಣದುದ್ದಕ್ಕೂ ದಿನಕ್ಕೆ ಐದು ಗಂಟೆಗಳ ಕಾಲ ಮಾತ್ರ ನಿದ್ರಿಸಿದ್ದಾರೆ.
ಇದೀಗ ಈ ಇಬ್ಬರ ಹೆಸರು ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸೇರಿಕೊಂಡಿದೆ. ಅದಕ್ಕೂ ಮಿಗಿಲಾಗಿ ಇವರು ಮಹಿಳಾ ಬೈಕರ್ಗಳಿಗೆ ಹೊಸ ಉದಾಹರಣೆಯನ್ನು ನಿರ್ಮಿಸಿಕೊಟ್ಟಿದ್ದಾರೆ, ಸ್ಫೂರ್ತಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.