ಮುಂಬೈ: ಎಚ್.ಡಿ.ಎಫ್.ಸಿ. ಎ.ಟಿ.ಎಂ.ಗಳಲ್ಲಿ ಇನ್ನು ಮುಂದೆ ಮುದ್ರಿತ ಪೇಪರ್ ರಸೀದಿಗಳು ಸಿಗುವುದಿಲ್ಲ. ಹೀಗೆಂದು ಗ್ರಾಹಕರು ಗಾಬರಿ ಯಾಗಬೇಕಿಲ್ಲ. ಬ್ಯಾಂಕ್ ಎ.ಟಿ.ಎಂ.ನಲ್ಲಿ ನಡೆಸಿದ ಹಣದ ವ್ಯವಹಾರವನ್ನು ಎಸ್.ಎಂ.ಎಸ್ ಮೂಲಕ ಗ್ರಾಹಕರಿಗೆ ಕಳುಹಿಸಲಿದೆ.
ಈ ಹಿಂದೆ ಎ.ಟಿ.ಎಂ.ನಲ್ಲಿ ನಡೆಸಿದ ಹಣದ ವ್ಯವಹಾರಕ್ಕೆ ಅಲ್ಲೇ ಮುದ್ರಿತ ರಸೀದಿಯನ್ನು ಗ್ರಾಹಕರು ಪಡೆಯುತ್ತಿದ್ದರು, ಈಗ ಹಾಗಿಲ್ಲ ನೀವು ನಡೆಸಿದ ವ್ಯವಹಾರದ ವಿವರ ಮತ್ತು ನಿಮ್ಮ ಖಾತೆಯಲ್ಲಿರುವ ಮೊಬಲಗನ್ನು ಎಸ್.ಎಂ.ಎಸ್ ಮೂಲಕ ಅಲರ್ಟ್ಗಳನ್ನು ತಿಳಿಸಲಿದೆ. ಈ ಮೂಲಕ ಬ್ಯಾಂಕ್ ಪರಿಸರ ಸ್ನೇಹಿಯಾಗಲು ಚಿಂತಿಸುತ್ತಿದೆ.
ಪ್ರಥಮ ಹಂತದಲ್ಲಿ ಕೆಲವೆಡೆ ಈ ಯೋಜನೆಯನ್ನು ಅಳವಡಿಸಲಾಗುತ್ತದೆ, ಅನಂತರ ತನ್ನ ಎಲ್ಲಾ ಎ.ಟಿ.ಎಂ.ಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲು ಚಿಂತಿಸಲಾಗುವುದು ಎಂದು ಬ್ಯಾಂಕ್ ಹೇಳಿದೆ.
ಈ ಹೊಸ ವ್ಯವಸ್ಥೆ ಅಳವಡಿಕೆಯಿಂದ ಬ್ಯಾಂಕ್ಗೆ 10 ಕೋಟಿ ರೂ ಉಳಿತಾಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.