ನವದೆಹಲಿ: ಪದ್ಮ ಪ್ರಶಸ್ತಿಗಳಿಗೆ ಲಾಬಿ ನಡೆಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯ ಸಿಕ್ಕಿ ಬಳಿಕ ಅತೀಹೆಚ್ಚು ದೆಹಲಿಗರಿಗೆಯೇ ಪದ್ಮ ಪ್ರಶಸ್ತಿಗಳನ್ನು ನೀಡಿರುವುದರ ಹಿಂದಿನ ಮರ್ಮವನ್ನು ಅವರು ಪ್ರಶ್ನಿಸಿದ್ದಾರೆ.
ಅತೀಹೆಚ್ಚು ಪದ್ಮ ಪ್ರಶಸ್ತಿಗಳನ್ನು ದೆಹಲಿಗರಿಗೆ ನೀಡಲಾಗಿದೆ. ಅದರಲ್ಲೂ ಹೆಚ್ಚಿನವರು ವೈದ್ಯರೇ ಆಗಿದ್ದಾರೆ. ಅಂದರೆ ಎಲ್ಲಾ ಪ್ರತಿಭೆಗಳು ಇರುವುದು ದೆಹಲಿಯಲ್ಲೇ ಎಂದರ್ಥವೇ ಎಂದು ಪ್ರಶ್ನಿಸಿದ ಅವರು, ರಾಜಕಾರಣಿಗಳ ಆರೋಗ್ಯವನ್ನು ನೋಡಿಕೊಂಡ ಹಿನ್ನಲೆಯಲ್ಲಿ ಅವರಿಗೆ ಈ ಪ್ರಶಸ್ತಿ ದೊರೆತಿರಬೇಕು ಎನ್ನುವ ಮೂಲಕ ಹಿಂದಿನ ಸರ್ಕಾರದ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದ ಮೂಲೆ ಮೂಲೆಯ ನಾಗರಿಕನಿಗೂ ಪದ್ಮ ಪ್ರಶಸ್ತಿ ಪಡೆಯುವ ಅವಕಾಶ ಲಭಿಸಿದೆ. ಕಳೆದ 2-3 ವರ್ಷದಿಂದ ಈ ವ್ಯವಸ್ಥೆ ಪಾರದರ್ಶಕಗೊಂಡಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.