ಮುಂಬಯಿ: ನಮ್ಮ ದೇಶದ ಎಷ್ಟೋ ಜನಕ್ಕೆ ಇನ್ನೂ ಸರಿಯಾದ ವೈದ್ಯಕೀಯ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ. ದುಬಾರಿ ಖಾಸಗಿ ಆಸ್ಪತ್ರೆಗಳ ಮೆಟ್ಟಿಲು ಹತ್ತುವ ಧೈರ್ಯವೂ ಬಡವರಿಗಿಲ್ಲ. ಪರಿಸ್ಥಿತಿ ಹೀಗಿರುವಾಗ ಮಹಾರಾಷ್ಟ್ರದ ನಾಗ್ಪುರದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರೋಗಿ ಮತ್ತು ಆತನ ಕುಟುಂಬದವರಿಗಾಗಿ ಅತ್ಯುನ್ನತ ಸೇವೆಯನ್ನು ಒದಗಿಸುತ್ತಿದೆ.
ವೈದ್ಯರು, ಔಷಧಿಗಳ ಬಳಿಕ ಬಹುತೇಕ ರೋಗಿ ಮತ್ತು ಆತನನ್ನು ನೋಡಿಕೊಳ್ಳುವ ಕುಟುಂಬ ಸದಸ್ಯರಿಗೆ ಎದುರಾಗುವ ಸಮಸ್ಯೆಯೆಂದರೆ ಅದು ಆಹಾರ. ಆಸ್ಪತ್ರೆ ಕ್ಯಾಂಟೀನ್ನಲ್ಲಿ ಉತ್ತಮ ಆಹಾರ ದೊರೆಯುವುದಿಲ್ಲ, ಹೊರಗಡೆ ದುಬಾರಿ ಹಣ. ಇದು ರೋಗಿಯ ಮನೆಯವರನ್ನು ತೊಂದರೆಗೀಡಾಗುವಂತೆ ಮಾಡುತ್ತದೆ.
ಈ ಸಮಸ್ಯೆಯನ್ನು ಅರಿತಿರುವ ನಾಗ್ಪುರದಲ್ಲಿನ ಆಸ್ಪತ್ರೆಯಲ್ಲಿ ರೂ.10ಕ್ಕೆ ಹೊಟ್ಟೆ ತುಂಬಾ ತಿನ್ನಬಹುದಾದ ಥಾಲಿ ಸಿಗುತ್ತದೆ. ಯುವ ಝೆಪ್ ಪ್ರತಿಷ್ಠಾನ ಈ ಸೇವೆಯನ್ನು ಇಲ್ಲಿ ಆರಂಭಿಸಿದ್ದು, ಥಾಲಿಗೆ ‘ದೀನ್ದಯಾಳ್ ಥಾಲಿ’ ಎಂದು ಹೆಸರಿಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.