ಸುಳ್ಯ : ಅಂದು ತನ್ನ ಶೀಲ ಕಾಪಾಡಿಕೊಳ್ಳಲು ಸೌಮ್ಯ ಭಟ್ ಅವರು ತಮ್ಮ ಪ್ರಾಣತ್ಯಾಗವನ್ನು ಮಾಡಿದ್ದರು, ಅಂತೆಯೇ ಇಂದು ಅಕ್ಷತಾ ಅವರು ತಮ್ಮ ಮಾನವನ್ನು ಕಾಪಾಡಿಕೊಳ್ಳಲು ಪ್ರಾಣ ತೆತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ತಮ್ಮ ಮನದ ನೋವನ್ನು ತೋಡಿಕೊಂಡರು. ಮೃತ ಅಕ್ಷತಾ ಅವರ ಸ್ವಗೃಹಕ್ಕೆ ಭೇಟಿ ನೀಡಿದ ವೇಳೆ ಅವರ ಕುಟುಂಬಕ್ಕೆ 25 ಸಾವಿರ ರೂ. ಗಳ ಚೆಕ್ ಅನ್ನು ಹಸ್ತಾಂತರಿಸುತ್ತಾ ಬೇರೆ ಧರ್ಮೀಯರಿಂದ ಆಕ್ರಮಣಕ್ಕೆ ಒಳಗಾದ ಕುಟುಂಬಕ್ಕೆ ಮಾತ್ರ ಸಹಾಯ ಮಾಡದೆ ಎಲ್ಲಾ ಬಡ ಹಿಂದೂ ಕುಟುಂಬಕ್ಕೆ ಸಹಾಯ ಮಾಡಬೇಕು ಎಂದು ತಿಳಿಸಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಅಲ್ಲದೆ ಮೃತರ ಕುಟುಂಬ ಬಡತನದಿಂದ ಕೂಡಿದ್ದು ಅವರ ಖಾತೆಯ ವಿವರವನ್ನು ಪಡೆದ ಕಿಶೋರ್ ಅವರು, ಹಿಂದೂ ಸಮಾಜ ಈ ಬಡ ಕುಟುಂಬಕ್ಕೆ ಸಹಾಯವನ್ನು ಮಾಡಿ ಇವರ ಕುಟುಂಬಕ್ಕೆ ಆಸರೆಯಾಗಬೇಕು ಎಂದು ವಿನಂತಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಿಕಾ ಸಮಿತಿಯ ಸುಳ್ಯ ಘಟಕದ ಅಧ್ಯಕ್ಷೆ ಶ್ರೀಮತಿ ಶ್ರೀದೇವಿ ನಾಗರಾಜ ಭಟ್, ಮುಳ್ಳೆರಿಯಾ ಹವ್ಯಕ ಮಂಡಲದ ಕಾರ್ಯದರ್ಶಿ ಪೈಸಾರಿ ಭಟ್ ಅವರು, ಪುತ್ತೂರು BJP ಘಟಕದಿಂದ ವಿದ್ಯಾ ಆರ್ ಗೌರಿ, ವಿಧ್ಯಾಶ್ರೀ ಶಾಲೆಯ ಅಧ್ಯಕ್ಷ ಶ್ರೀ ಗಣೇಶ್, ಕಹಳೆ ನ್ಯೂಸ್ ಮುಖ್ಯಸ್ಥ ಶ್ಯಾಮ ಸುದರ್ಶನ, ಪ್ರವೀಣ್ ಕಾಟುಕುಕ್ಕೆ ಮತ್ತು ಸುಳ್ಯ ತಾಲೂಕು ಪಂಚಾಯಿತಿ ಮತ್ತು ನಗರ ಪಂಚಾಯಿತಿ ಸದಸ್ಯರು, ಮುಳ್ಳೆರಿಯಾ ಹವ್ಯಕ ಘಟಕದ ಸದಸ್ಯರು ಉಪಸ್ಥಿತರಿದ್ದರು.
Account details
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.