ನವದೆಹಲಿ: ಆರ್ಬಿಐ ಮಂಗಳವಾರ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯನ್ನು ಪ್ರಕಟಗೊಳಿಸಿದ್ದು, ಅಲ್ಪಾವಧಿ ಬಡ್ಡಿದರವಾದ ರೆಪೋ ದರದಲ್ಲಿ ಶೇ.0.25ರಷ್ಟು ಕಡಿತಗೊಳಿಸಿದೆ.
ಹಣದುಬ್ಬರ ಗಣನೀಯವಾಗಿ ತಗ್ಗಿರುವ ಹಿನ್ನಲೆಯಲ್ಲಿ ಹೂಡಿಕೆಗೆ ಉತ್ತೇಜನ ನೀಡುವ ಸಲುವಾಗಿ ರೆಪೋ ದರ ಕಡಿತಗೊಳಿಸಲಾಗಿದೆ, ಈ ವರ್ಷದಲ್ಲಿ ಮಾಡುತ್ತಿರುವ ಮೂರನೇ ಬಡ್ಡಿ ದರ ಕಡಿತ ಇದಾಗಿದೆ. ಜನವರಿ ಮತ್ತು ಮಾರ್ಚ್ನಲ್ಲೂ ಶೇ.0.25ರಷ್ಟು ಕಡಿತಗೊಳಿಸಲಾಗಿತ್ತು.
ಆರ್ಥಿಕ ಸ್ಥಿತಿ ಚೇರಿಕೆಯಾಗಿರುವ ಹಿನ್ನಲೆಯಲ್ಲಿ ಹೂಡಿಕೆಗೆ ಉತ್ತೇಜನ ನೀಡಲು ರೆಪೋ ದರ ಇಳಿಸಿದ್ದೇವೆ, ಬ್ಯಾಂಕುಗಳು ಇದರ ಲಾಭವನ್ನು ಶೀಘ್ರವೇ ಗ್ರಾಹಕರಿಗೆ ನೀಡುತ್ತದೆ ಎಂಬ ವಿಶ್ವಾಸವಿದೆ ಎಂದು ಆರ್ಬಿಐ ಗವರ್ನರ್ ರಘುರಾಮ್ ರಾಜನ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.