ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ನ್ನು ಗುರುವಾರ ವಿತ್ತ ಸಚಿವ ಅರುಣ್ ಜೇಟ್ಲಿಯವರು ಮಂಡನೆಗೊಳಿಸಿದರು. ದೇಶದ ಗ್ರಾಮೀಣ ಜನರಿಗೂ ಅರ್ಥವಾಗುವಂತೆ ಅವರು ಹಿಂದಿಯಲ್ಲೇ ಬಜೆಟ್ ಮಂಡನೆಗೊಳಿಸಿದ್ದು ವಿಶೇಷವಾಗಿತ್ತು.
೭೫ನೇ ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ರೈತರ ಆದಾಯದಲ್ಲಿ ದ್ವಿಗುಣಗೊಳಿಸುವ, ಉದ್ಯೋಗ ಸೃಷ್ಟಿಯ ಭರವಸೆಯನ್ನು ಜೇಟ್ಲಿ ನೀಡಿದ್ದಾರೆ. ಆರ್ಥಿಕ ಸುಧಾರಣೆ ಪ್ರಕ್ರಿಯೆಯನ್ನು ಸಮರ್ಥವಾಗಿ ನಿರ್ವಹಿಸಿದ್ದೇವೆ. ಕೃಷಿ ಕ್ಷೇತ್ರವನ್ನು ಹೆಚ್ಚು ಬಲಪಡಿಸಿದ್ದೇವೆ. ಸಾಕಷ್ಟು ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿ ಮಾಡಿದ್ದೇವೆ ಎಂದರು.
ಬಜೆಟ್ ವೇಳೆ ಜೇಟ್ಲಿ ಭಾಷಣದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
ಜಗತ್ತಿನಲ್ಲೇ ಅತಿ ಹೆಚ್ಚು ಮೊತ್ತದ ಆರೋಗ್ಯ ವಿಮೆ 50 ಲಕ್ಷ ಜನರಿಗೆ ಈ ಯೋಜನೆಯಿಂದ ಲಾಭ ಒಂದು ಕುಟುಂಬಕ್ಕೆ 5 ಲಕ್ಷ ರೂ ಆರೋಗ್ಯ ವಿಮೆ 10 ಕೋಟಿ ಕುಟುಂಬಗಳಿಗೆ ಯೋಜನೆ ತರುತ್ತಿದ್ದೇವೆ.
ಪರಿಶಿಷ್ಟ ಜಾತಿ ಕಲ್ಯಾಣಕ್ಕೆ 56,619ಕೋಟಿ, ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ 39,135 ಕೋಟಿ ಘೋಷಣೆ
ಕ್ಷಯ ರೋಗಿಗಳಿಗಾಗಿ ‘ಆಯುಷ್ಮಾನ್ ಭಾರತ್’ ಯೋಜನೆ, 600 ಕೋಟಿ ಅನುದಾನ
ಆರೋಗ್ಯ ಕ್ಷೇಮ ಕೇಂದ್ರಗಳಿಗಾಗಿ 12,00 ಕೋಟಿ ಅನುದಾನ ಬಿಡುಗಡೆ, 10 ಕೋಟಿ ಬಡ ಕುಟುಂಬಗಳಿಗೆ ನೆರವು
ಜಿಲ್ಲಾಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದರ ಜತೆ 24 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಸ್ಥಾಪನೆ
ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಸೌಲಭ್ಯ ಹೆಚ್ಚಿಸಲು ಆದ್ಯತೆ
ಬುಡಕಟ್ಟು ವಿದ್ಯಾರ್ಥಿಗಳಿಗಾಗಿ ನವೋದಯ ಮಾದರಿಯಲ್ಲಿ ‘ಏಕಲವ್ಯ’ ವಸತಿ ಶಾಲೆ
ವಡೋದರಾದಲ್ಲಿ ರೈಲ್ವೆ ವಿಶ್ವವಿದ್ಯಾಲಯ ನಿರ್ಮಾಣ ಘೋಷಣೆ
ಸ್ವಚ್ಛ ಭಾರತ ಯೋಜನೆ ಅಡಿ ಈವರೆಗೆ 6 ಕೋಟಿ ಶೌಚಾಲಯಗಳ ನಿರ್ಮಾಣ
ಬಡವರಿಗೆ ಉಚಿತ ಔಷಧಿ ದೊರಕಿಸಲು 12,000 ಕೋಟಿ ರುಪಾಯಿ ನಿಗದಿಪಡಿಸಲಾಗಿದ್ದು, ಬಡವರಿಗೆ ಉಚಿತ ಡಯಾಲಿಸಿಸ್, ಸ್ಟೆಂಟ್ ದರ ಇಳಿಸಲಾಗಿದೆ, ಎಲ್ಲ ಸೇವೆಗಳು ಆನ್ ಲೈನ್ ನಲ್ಲಿವೆ… ಇವೆಲ್ಲದರಿಂದ ಜನರಿಗೆ ಲಾಭ ಸಿಗುತ್ತಿದೆ.
ನ್ಯಾಷನಲ್ ಹೆಲ್ತ್ ಪಾಲಿಸಿ ಮೂಲಕ ಅತ್ಯುತ್ತಮ ಆರೋಗ್ಯ ಸೇವೆ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಗೆ 30 ಸಾವಿರ ಕೋಟಿ ರಾಷ್ಟ್ರೀಯ ಹೆಲ್ತ್ ಪಾಲಿಸಿ ಮೂಲಕ ರೋಗಿಗಳಿಗೆ ಉಚಿತ
ವಡೋದರಾದಲ್ಲಿ ರೈಲ್ವೆ ವಿವಿ ಸ್ಥಾಪನೆ, ಬಿಟೆಕ್ ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ಸ್ಕಾಲರ್ ಶಿಪ್
20 ಲಕ್ಷ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯೋಜನೆ ಗ್ರಾಮೀಣ ಪ್ರದೇಶದಲ್ಲಿ ಬ್ಲ್ಯಾಕ್ ಬೋರ್ಡ್ ಬದಲು ಡಿಜಿಟಲ್ ಬೋರ್ಡ್ ಗೆ ಕ್ರಮ
ಪ್ರತಿ ವರ್ಷ 1000 ಬಿಟೆಕ್ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪಿ ಎಚ್ ಡಿ ಮಾಡಲು ಉತ್ತೇಜನ
ಬುಡಕಟ್ಟು ವಿದ್ಯಾರ್ಥಿಗಳಿಗೆ ಏಕಲವ್ಯ ವಸತಿ ಶಾಲೆ ಯೋಜನೆ
ರೈತರ ಸಾಲಗಳಿಗಾಗಿ 11 ಲಕ್ಷ ಕೋಟಿ ಅನುದಾನ ಬೆಳೆಯನ್ನು ನೇರವಾಗಿ ಮಾರಾಟ ಮಾಡಲು ಅವಕಾಶ
ಗ್ರಾಮಾಂತರ ಬಜಾರ್-ಇ ನಿರ್ಮಿಸಲು ಯೋಜನೆ 2022ವೇಳೆಗೆ ಮನೆ ಇಲ್ಲದವರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಸ್ವಂತ ಮನೆ ನಿರ್ಮಾಣ ಮಾಡಲು ಯೋಜನೆ
8 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಪೂರೈಕೆ 42 ಮೆಗಾ ಫುಡ್ ಪಾರ್ಕ್ ಪ್ರಾರಂಭ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಲೆ ನೀಡಲು ನಿರ್ಧಾರ
ಎಪಿಎಂಸಿ ಉನ್ನತೀಕರಣಕ್ಕೆ 2,000 ಕೋಟಿ,
ಅಹಾರ ಸಂಸ್ಕರಣೇ ಖಾದಿ ಗ್ರಾಮೋದ್ಯಮಕ್ಕೆ 200ಕೋಟಿ ಅನುದಾನ,
ಆಪರೇಷನ್ ಗ್ರೀನ್ ಗೆ 500 ಕೋಟಿ ರೂ ಮೀಸಲು
ರೈತರ ಅನುಕೂಲಕ್ಕೆ 22 ಸಾವಿರ ಮಾರುಕಟ್ಟೆ
ಬಿದಿರು ಬೆಳೆಗೆ 12,090 ಕೋಟಿ ರೂ ವಿಶೇಷ ಅನುದಾನ
ಟೊಮ್ಯಾಟೋ, ಈರುಳ್ಳಿ, ಆಲೂಗಡ್ಡೆ ಕೃಷಿಗೆ 500 ಕೋಟಿ ರೂ ಅನುದಾನ ಘೋಷಣೆ ಜಿಲ್ಲೆಗಳಿಗೆ ವಿಶೇಷ ಕ್ಲಸ್ಟರ್ ಪದ್ಧತಿ, ಈ ನಿಟ್ಟಿನಲ್ಲಿ ಯೋಜನೆ
ಮೀನುಗಾರಿ ಸೇರಿದಂತೆ ಅಕ್ವಾಕಲ್ಚರ್ಮೂ ಲಸೌಕರ್ಯ ಅಭಿವೃದ್ಧಿಗೆ ಅನುದಾನ 10 ಸಾವಿರ ಕೋಟಿ
2017-18 ರಲ್ಲಿ 27.5ಟನ್ ಆಹಾರ ಉತ್ಪಾದನೆ
ಮಾರ್ಚ್ ವೇಳೆಗೆ 470 ಎಪಿಎಂಸಿಗಳು ಇ-ನಾಮ್ ಗೆ ಕನೆಕ್ಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.