ಲಕ್ನೋ: ಇದೀಗ ಉತ್ತರಪ್ರದೇಶದ ರಾಜಧಾನಿಯಲ್ಲಿ ನಡೆದ ಲಕ್ನೋ ಮಹೋತ್ಸವದಲ್ಲಿ ಹಲವು ಐತಿಹಾಸಿಕ ಗಾಳಿಪಟಗಳನ್ನು ಪ್ರದರ್ಶಿಸಲಾಯಿತು.
ಬ್ರಿಟಿಷರ ವಿರುದ್ಧ ಘೋಷಣೆಯುಳ್ಳ ಗಾಳಿಪಟ, 1920ರಲ್ಲಿ ಜರ್ಮನ್ ಪೇಪರ್ವೊಂದರಲ್ಲಿ ಕಾಣಿಸಿಕೊಂಡಿದ್ದ ಗಾಳಿಪಟ ಸೇರಿದಂತೆ ಹಲವಾರು ಐತಿಹಾಸಿಕ ಗಾಳಿಪಟಗಳು ಜನರನ್ನು ಆಕರ್ಷಿಸಿದವು.
ಸ್ವಾತಂತ್ರ್ಯ ಚಳುವಳಿಯಲ್ಲಿ ಗಾಳಿಪಟಗಳೂ ಸಣ್ಣ ಪಾತ್ರವನ್ನು ನಿಭಾಯಿಸಿವೆ. 1928ರಲ್ಲಿ ಕೈಸರ್ಬಾಗ್ ಬರದರಿಯಲಲಿ ಸೈಮನ್ ಸಭೆ ನಡೆಸುತ್ತಿದ್ದ ಸಂದರ್ಭ ಆತನ ವಿರುದ್ಧ ’ಸೈಮನ್, ಗೋ ಬ್ಯಾಕ್’ ಎಂಬಿತ್ಯಾದಿ ಘೋಷಣೆಗಳಿದ್ದ ಗಾಳಿಪಟವನ್ನು ಹಾರಿಸಲಾಗಿತ್ತು.
ಇದೀಗ ಮಹೋತ್ಸವದಲ್ಲಿ ಈ ಎಲ್ಲಾ ಗಾಳಿಪಟಗಳು ಜನರ ಗಮನ ಕೇಂದ್ರೀಕರಿಸಿವೆ. ಇದರಲ್ಲಿ ಸುರೇಶ್ ಚಂದ್ರ ಒಡೆತನದ ಗಾಳಿಪಟ ಅತೀ ಹಳೆಯ ಗಾಳಿಪಟ ಎಂದು ಲಿಮ್ಕಾ ದಾಖಲೆ ಮಾಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.