ಪಣಜಿ: ಗೋವಾ ಮುಂದಿನ ಅಕ್ಟೋಬರ್ನಿಂದ ಸಂಪೂರ್ಣ ನಗದು ರಹಿತ ಹಾಗೂ ಡಿಜಟಲೀಕರಣಗೊಳ್ಳಲಿದೆ ಎಂದು ಗೋವಾ ಸಿಎಂ ಮನೋಹರ್ ಪರಿಕ್ಕರ್ ಘೋಷಣೆ ಮಾಡಿದ್ದಾರೆ.
ನಬಾರ್ಡ್ (National Bank for Agriculture and Rural Development) ಆಯೋಜನೆಗೊಳಿಸಿದ್ದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪರಿಕ್ಕರ್, ‘2018-19ರ ರಾಜ್ಯ ಬಜೆಟ್ನಲ್ಲಿ ಶೇ.100ರಷ್ಟು ಡಿಜಿಟಲೀಕರಣಕ್ಕೆ ಒತ್ತು ನೀಡಲಾಗುವುದು’ ಎಂದಿದ್ದಾರೆ.
‘ಸಂಪೂರ್ಣ ಡಿಜಟಲ್ ಪೇಮೆಂಟ್ ಮೋಡ್ಗೆ ಬದಲಾಗುತ್ತಿದ್ದೇವೆ. ಮುಂದಿನ 7 ತಿಂಗಳಲ್ಲಿ ಶೇ.100ರಷ್ಟು ಡಿಜಟಲೀಕರಣಗೊಳ್ಳುತ್ತೇವೆ’ ಎಂದಿದ್ದಾರೆ.
ನಗದು ರೂಪದಲ್ಲಿ ಯಾವುದೇ ಸರ್ಕಾರಿ ಪಾವತಿಯನ್ನು ಸ್ವೀಕಾರ ಮಾಡುವುದಿಲ್ಲ, ತುರ್ತು ಪರಿಸ್ಥಿತಿಯಲ್ಲಿ ಮಾತ್ರ ನಗದು ಸ್ವೀಕಾರ ನಡೆಯಲಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.