ನವದೆಹಲಿ: ಪ್ರವಾಸೋದ್ಯಮ ಸಚಿವಾಲಯವು ಜ.26ರಿಂದ ಜ.31ರವರೆಗೆ ‘ಭಾರತ್ ಪರ್ವ್’ನ್ನು ಕೆಂಪುಕೋಟೆಯಲ್ಲಿ ಆಯೋಜನೆಗೊಳಿಸಿದ್ದು, ‘ನಮ್ಮ ದೇಶವನ್ನು ನೋಡಿ’ ಎಂಬ ವಿಷಯದ ಮೇಲೆ ಇದು ಕೇಂದ್ರಿತವಾಗಿದೆ.
ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿ ಪರ್ವದಲ್ಲಿ ಪಾಲ್ಗೊಳ್ಳುತ್ತಿದ್ದು, ದೇಶದ ವೈವಿಧ್ಯ ಸಂಸ್ಕೃತಿ, ಆಹಾರ, ಕರಕುಶಲಗಳ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ವಿವಿಧ ರಾಜ್ಯಗಳ ಕಲಾವಿದರು ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ. 50 ಕರಕುಶಲ ಸ್ಟಾಲ್ಗಳನ್ನು ಇಲ್ಲಿ ಹಾಕಲಾಗಿದೆ. ’ನವ ಭಾರತವನ್ನು ನಾವು ನಿರ್ಮಿಸಿಯೇ ಸಿದ್ಧ’ ಎಂಬ ಥೀಮ್ನ ಮೇಲೆ ಪೇಂಟಿಂಗ್ ಎಕ್ಸಿಬಿಷನ್ ನಡೆಯುತ್ತಿದೆ.
ಜನರು ಟಿಕೆಟ್ ಪಡೆದು, ಐಡಿ ಕಾರ್ಡ್ ತೋರಿಸಿ ‘ಭಾರತ್ ಪರ್ವ್’ದೊಳಗೆ ಪ್ರವೇಶ ಪಡೆದುಕೊಳ್ಳಬಹುದು. ನಾಳೆ ಇದು ಅಂತ್ಯಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.