ಇಟಲಿ ದೇಶದ 35 ವರ್ಷದ ಅರಿಯನ್ನ ಜಿನೆರ್ರವ ಬ್ರುನೊ ಭಾರತಕ್ಕಾಗಿ ಮಹಿಳೆಯರ ಸಬಲೀಕರಣಕ್ಕಾಗಿ ಕನ್ಯಾಕುಮಾರಿಯಿಂದ ಗಂಗೋತ್ರಿಯವರೆಗೆ ಕಾಲ್ಕನಡಿಯ ಪ್ರಯಾಣ ನಡೆಸುತ್ತಿದ್ದಾರೆ. ಸುಮಾರು 3,070 ಕಿಲೋಮೀಟರ್ಗಳನ್ನು ಅವರು ಕ್ರಮಿಸಲಿದ್ದಾರೆ.
ಏನಾದರು ಮಾಡಬೇಕೆಂಬ ಛಲ ಅವರಿಗಿತ್ತು, ಭಾರತಕ್ಕೆ ಸುಮಾರು ಬಾರಿ ಆಗಮಿಸಿದ್ದ ಅವರಿಗೆ ಈ ದೇಶ, ಜನರು, ಆಹಾರ ಎಲ್ಲದರ ಬಗ್ಗೆ ಪ್ರೀತಿ ಮೂಡಿತ್ತು. 2012ರಲ್ಲಿ ಆಯುರ್ವೇದ ಮತ್ತು ಪಂಚಕರ್ಮ ಕೋರ್ಸಿಗೆಂದು ಅವರು ಕೇರಳಕ್ಕೆ ಆಗಮಿಸಿದ್ದರು. ಅದು ಅವರ ಮೊದಲ ಭಾರತ ಭೇಟಿಯಾಗಿತ್ತು. ಆ ಭೇಟಿ ನನ್ನ ಜೀವನವನ್ನು ಬದಲಾಯಿಸಿತು. ಅಂದಿನಿಂದ ಪದೇ ಪದೇ ಇಲ್ಲಿಗೆ ಬರಲಾರಂಭಿಸಿದೆ ಎಂದು ಬ್ರುನೋ ಅವರೇ ಹೇಳುತ್ತಾರೆ.
ದೇಶದೊಂದಿಗೆ ಅಗಾಧ ಬಾಂಧವ್ಯ, ಈ ನಾಡಿನ ಮಹಿಳೆಯರಿಗಾಗಿ ಏನಾದರು ಮಾಡಬೇಕೆಂಬ ಆಸೆ ಅವರನ್ನು ಕನ್ಯಾಕುಮಾರಿಯಿಂದ ಗಂಗೋತ್ರಿಯವರೆಗೆ ನಡಿಗೆ ಮಾಡುವಂತೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.