ಗುವಾಹಟಿ: ಮಹಿಳೆಯರು ಮತ್ತು ಮಕ್ಕಳಿಗಾಗಿಯೇ ಮಹಿಳಾ ಡ್ರೈವರ್ಗಳನ್ನು ಹೊಂದಿರುವ ಪಿಂಕ್ ಆಟೋಗಳು ಅಸ್ಸಾಂನ ಬೊಂಗೈಗಾನ್ ನಗರದ ಸುಂದರ ರಸ್ತೆಗಳನ್ನು ಅಲಂಕರಿಸಿದೆ. 13 ಮಹಿಳೆಯರ ತಂಡ ಈ ಆಟೋವನ್ನು ಚಲಾಯಿಸುತ್ತಿದೆ.
13 ಆಟೋಗಳ ಪೈಕಿ 10 ಆಟೋಗಳನ್ನು ಬೊಂಗೈಗಾನ್ ರಿಫೈನರಿ ದಾನವಾಗಿ ನೀಡಿದ್ದು, 3 ಆಟೋಗಳನ್ನು ಸ್ವಹಾಯ ಗುಂಪುಗಳ ಸಾಲದ ಮೂಲಕ ಖರೀದಿ ಮಾಡಲಾಗಿದೆ. ನ್ಯಾಷನಲ್ ಅರ್ಬನ್ ಲೈವ್ಲಿಹುಡ್ ಮಿಶನ್ ಅಡಿಯಲ್ಲಿ ಈ ಆಟೋಗಳನ್ನು ಓಡಿಸಲಾಗುತ್ತಿದೆ.
ಚಾಲನೆ(ಡ್ರೈವಿಂಗ್) ಕಲಿತು ಆಟೋ ಓಡಿಸುತ್ತಿರುವ 13 ಮಹಿಳೆಯರು ತಿಂಗಳಿಗೆ ಕನಿಷ್ಠವೆಂದರೆ 10 ಸಾವಿರ ರೂಪಾಯಿಗಳನ್ನು ಸಂಪಾದನೆ ಮಾಡುತ್ತಿದ್ದಾರೆ. ಮಾತ್ರವಲ್ಲ ಈ ಆಟೋಗಳಿಂದಾಗಿ ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆಯೂ ಸಿಕ್ಕಿದೆ.
ಪಿಂಕ್ ಆಟೋಗಳು ಈಗಾಗಲೇ ದೆಹಲಿ, ಸೂರತ್, ಮುಂಬೈ, ಜಾರ್ಖಂಡ, ಒರಿಸ್ಸಾಗಳಲ್ಲಿ ಕಾರ್ಯಾಚರಿಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.