ಹೊಸದಿಲ್ಲಿ: ದೇಶಾದ್ಯಂತ ಪ್ರತಿನಿತ್ಯ ನೂರಾರು ಮಕ್ಕಳು ಕಾಣೆಯಾಗುತ್ತಿದ್ದು, ಇಂಥ ಮಕ್ಕಳನ್ನು ಪತ್ತೆ ಹಚ್ಚಲು ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವೆಬ್ಸೈಟ್ ಒಂದನ್ನು ಆರಂಭಿಸಲಿದೆ.
ಮಹಿಳಾ ಮತ್ತು ಮಕ್ಕಳ ಸಚಿವಾಲಯ ದೇಶದ ಇಂಥ ಮೊದಲ ವೆಬ್ಸೈಟ್ ಉದ್ಘಾಟಿಸಲಿದ್ದು, ಕಾಣೆಯಾದ ಮಕ್ಕಳ ಫೋಟೋವನ್ನು ಈ ವೆಬ್ಸೈಟ್ನಲ್ಲಿ ನೇರವಾಗಿ ಅಪ್ಲೋಡ್ ಮಾಡಬಹುದಾಗಿದೆ. ನಾಪತ್ತೆಯಾದ ಮಕ್ಕಳ ವಿವರ, ಪತ್ತೆಯಾದವರ ಬಗ್ಗೆ khoyapaya.gov.in ವೆಬ್ಸೈಟ್ನಿಂದ ಮಾಹಿತಿ ಪಡೆಯಬಹುದಾಗಿದೆ.
ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಲಿರುವ ಈ ವೆಬ್ಸೈಟ್ನಲ್ಲಿ ಮಗು ಕಣ್ಮರೆಯಾಗಿದೆ, ಕಣ್ಮರೆಯಾದ ಮಗುವನ್ನು ಪತ್ತೆ ಹಚ್ಚಿ, ಕಣ್ಮರೆಯಾದ ಮಗು ಪತ್ತೆ ಎಂಬ ವಿವರಗಳಿರುತ್ತದೆ.
ಪೊಲೀಸರ ನೆರವು ಪಡೆಯಲು ಈ ವೆಬ್ಸೈಟ್ ಸಹಕಾರಿಯಾಗಲಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.