ಬೆಂಗಳೂರು: ಮುಂದಿನ ಜನವರಿಯ ಎರಡನೇ ವಾರದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಮೆರಿಕಾ ರಾಯಭಾರ ಕಛೇರಿಯ ಕಾರ್ಯಾಚರಣೆ ಆರಂಭಗೊಳ್ಳಲಿದೆ.
ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಬೆಂಗಳೂರಿನಲ್ಲಿ ಅಮೆರಿಕಾ ರಾಯಭಾರ ಕಛೇರಿಯ ಕಾರ್ಯಾರಂಭವನ್ನು ಘೋಷಣೆ ಮಾಡಿದ್ದಾರೆ. ಯುಎಸ್ ಕಾನ್ಸುಲೇಟ್ ಸ್ಥಾಪನೆಯು ನಗರಕ್ಕೆ ಐತಿಹಾಸಿಕ ಮೈಲಿಗಲ್ಲು ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹರ್ಷ ವ್ಯಕ್ತಪಡಿಸಿದ್ದಾರೆ.
ಯುಎಸ್ ರಾಯಭಾರ ಕಛೇರಿಯ ಉದ್ಘಾಟನೆಯು ಬೆಂಗಳೂರಿನ ನಾಗರಿಕರ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಲು ವರ್ಷಗಳ ನಿರಂತರ ಪ್ರಯತ್ನಕ್ಕೆ ದೊರೆತ ಫಲವಾಗಿದೆ ಎಂದು ಅವರು ಹೇಳಿದರು.
2019 ರಲ್ಲಿ ಸಂಸದರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ತೇಜಸ್ವಿ ಸೂರ್ಯ ಅವರು ಭಾರತದ ಐಟಿ ಆದಾಯಕ್ಕೆ 40 ಪ್ರತಿಶತವನ್ನು ಕೊಡುಗೆ ನೀಡುತ್ತಿರುವ ಮತ್ತು ಲಕ್ಷಗಟ್ಟಲೆ ಟೆಕ್ ವೃತ್ತಿಪರರಿಗೆ ನೆಲೆಯಾಗಿರುವ ಬೆಂಗಳೂರಿನಲ್ಲಿ ಯುಎಸ್ ರಾಯಭಾರ ಕಛೇರಿ ತೆರೆಯಲು ಒತ್ತಾಯಿಸುತ್ತಲೇ ಬಂದಿದ್ದಾರೆ. ನವೆಂಬರ್ 2019 ರಲ್ಲಿ, ಅವರು ಇಂಡೋ-ಯುಎಸ್ ಸಂಬಂಧಗಳಲ್ಲಿ ಬೆಂಗಳೂರಿನ ನಿರ್ಣಾಯಕ ಪಾತ್ರವನ್ನು ಒತ್ತಿಹೇಳಲು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದಿದ್ದರು.
ನಗರದಲ್ಲಿ ಯುಎಸ್ ಕಾನ್ಸುಲೇಟ್ ಇಲ್ಲದಿರುವುದರಿಂದ ಸಾವಿರಾರು ನಿವಾಸಿಗಳು ಯುಎಸ್ ವೀಸಾ-ಸಂಬಂಧಿತ ಸೇವೆಗಳಿಗಾಗಿ ಚೆನ್ನೈ ಅಥವಾ ಹೈದರಾಬಾದ್ಗೆ ಪ್ರಯಾಣಿಸುಬೇಕಾದ ಅನಿವಾರ್ಯತೆ ಇದೆ ಎಂಬುದನ್ನು ಮನವರಿಕೆ ಮಾಡಿದ್ದಾರೆ. ಈ ಎಲ್ಲಾ ಪ್ರಯತ್ನಗಳ ಫಲವಾಗಿ ಇಂದು ಬೆಂಗಳೂರಿನಲ್ಲಿ ಅಮೆರಿಕಾ ರಾಯಭಾರ ಕಛೇರಿ ತಲೆ ಎತ್ತುತ್ತಿದೆ.
Big update for Bengalureans –
January date set for the establishment of the US Consulate in Namma OoruFor years, Bengaluru—the IT capital contributing 40% of India’s IT revenue—lacked a US Consulate, forcing residents to travel to Chennai or Hyderabad for visa work. I made it… pic.twitter.com/vRMgOmiIle
— Tejasvi Surya (@Tejasvi_Surya) December 20, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.